ಪಾಕ್ ವಿರುದ್ಧ ಪ್ರತೀಕಾರ ದಾಳಿಗೆ ಭಾರತ ಚಿಂತನೆ: ಅಮೆರಿಕ ಅಧಿಕಾರಿ

ಭಾರತೀಯ ಸೇನೆ ಆಗಾಗ್ಗೆ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆಯಾದರೂ ಪಾಕಿಸ್ತಾನ ಎಚ್ಚೆತ್ತುಕೊಂಡಿಲ್ಲ. ಈ ಬೆಳವಣಿಗೆಗಳನ್ನು ಅಮೆರಿಕಾದ ರಕ್ಷಣಾ ವಿಭಾಗದ ಗುಪ್ತಚರ ಮುಖ್ಯಸ್ಥರೂ..
ಭಾರತ-ಪಾಕಿಸ್ತಾನ
ಭಾರತ-ಪಾಕಿಸ್ತಾನ
ವಾಷಿಂಗ್ ಟನ್: ಭಯೋತ್ಪಾದನೆಯನ್ನು ಉತ್ತೇಜಿಸುತ್ತಿರುವ ಪಾಕಿಸ್ತಾನ, ಭಾರತದ ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಉಗ್ರದಾಳಿ ನಡೆಸುತ್ತಿರುವುದು ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಹದಗೆಡಿಸಿದೆ. ಭಾರತೀಯ ಸೇನೆ ಆಗಾಗ್ಗೆ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆಯಾದರೂ ಪಾಕಿಸ್ತಾನ ಎಚ್ಚೆತ್ತುಕೊಂಡಿಲ್ಲ. ಈ ಬೆಳವಣಿಗೆಗಳನ್ನು ಅಮೆರಿಕಾದ ರಕ್ಷಣಾ ವಿಭಾಗದ ಗುಪ್ತಚರ ಮುಖ್ಯಸ್ಥರೂ ಗಮನಿಸುತ್ತಿದ್ದಾರೆ. 
ಭಾರತ-ಪಾಕಿಸ್ತಾನದ ನಡುವಿನ ಹದಗೆಡುತ್ತಿರುವ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾ ರಕ್ಷಣಾ ವಿಭಾಗದ ಗುಪ್ತಚರ ಮುಖ್ಯಸ್ಥರು, ಭಾರತ ಪಾಕಿಸ್ತಾನ ವಿರುದ್ಧ ದಂಡಾನಾತ್ಮಕ ಕ್ರಮ ಅನುಸರಿಸುವ ಮಾರ್ಗವನ್ನು ಪರಿಗಣಿಸುತ್ತಿದೆ ಎಂದು ಹೇಳಿದ್ದಾರೆ. 
ಭಾರತ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸುತ್ತಿದೆ ಹಾಗೂ ಇದೇ ಮಾರ್ಗವನ್ನು ಮುಂದುವರೆಸುತ್ತದೆ. ಅಷ್ಟೇ ಅಲ್ಲದೇ ಪಾಕಿಸ್ತಾನವನ್ನು ಒಂಟಿಯಾಗಿಸುವುದರ ಜೊತೆಗೆ ದಂಡನಾತ್ಮಕ ಕ್ರಮವನ್ನು ಅನುಸರಿಸುವ ಮಾರ್ಗವನ್ನು ಪರಿಗಣಿಸುತ್ತಿದೆ ಎಂದು ಲೆಫ್ಟಿನೆಂಟ್ ಜನರಲ್ ವಿನ್ಸೆಂಟ್ ಸ್ಟೀವರ್ಟ್ ಹೇಳಿದ್ದಾರೆ. 
ಭಾರತೀಯ ಸೇನೆ ನೌಶೇರಾ ಸೆಕ್ಟರ್ ನಲ್ಲಿ ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕಾ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಭಾರತ ಪಾಕಿಸ್ತಾನ ವಿರುದ್ಧ ದಂಡಾನಾತ್ಮಕ ಕ್ರಮ ಅನುಸರಿಸುವ ಮಾರ್ಗವನ್ನು ಪರಿಗಣಿಸುತ್ತಿದೆ ಎಂದು ಹೇಳಿರುವುದು ಮಹತ್ವ ಪಡೆದುಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com