ಅಫ್ಗಾನಿಸ್ತಾನದಲ್ಲಿ ರಂಜಾನ್ ಮೊದಲ ದಿನವೇ ಕಾರ್ ಬಾಂಬ್ ಸ್ಫೋಟ: 18 ಸಾವು

ಮುಸ್ಲಿಂರ ಪ್ರವಿತ ಹಬ್ಬ ರಂಜಾನ್ ಹಬ್ಬದ ಮೊದಲ ದಿನವೇ ಅಫ್ಗಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ...
ಆತ್ಮಾಹುತಿ ಕಾರ್ ಬಾಂಬ್ ದಾಳಿ
ಆತ್ಮಾಹುತಿ ಕಾರ್ ಬಾಂಬ್ ದಾಳಿ
ಕೋಸ್ಟ್: ಮುಸ್ಲಿಂರ ಪ್ರವಿತ ಹಬ್ಬ ರಂಜಾನ್ ಹಬ್ಬದ ಮೊದಲ ದಿನವೇ ಅಫ್ಗಾನಿಸ್ತಾನದಲ್ಲಿ ಆತ್ಮಾಹುತಿ ಕಾರ್ ಬಾಂಬ್ ಸ್ಫೋಟದಲ್ಲಿ ಕನಿಷ್ಠ 18 ಮಂದಿ ಮೃತಪಟ್ಟಿದ್ದಾರೆ. 
ಅಮೆರಿಕ ಸೇನೆ ಜತೆ ಅಫ್ಗಾನಿಸ್ತಾನ ಭದ್ರತೆ ಪಡೆ ಕಾರ್ಯ ನಿರ್ವಹಿಸುತ್ತಿದ್ದ ಸ್ಥಳವನ್ನು ಗುರಿಯಾಗಿರಿಸಿಕೊಂಡು ಆತ್ಮಾಹುತಿ ಕಾರ್ ಬಾಂಬ್ ಸ್ಫೋಟ ನಡೆಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕಾರ್ ಬಾಂಬ್ ಅನ್ನು ಸ್ಫೋಟಿಸಿದ್ದು ಇದರಲ್ಲಿ ಕನಿಷ್ಠ 18 ಮಂದಿ ಸಾವನ್ನಪ್ಪಿದ್ದು 6 ಮಂದಿಗೆ ಗಂಭೀರ ಗಾಯಗಳಾಗಿದೆ ಎಂದು ಸಚಿವಾಲಯ ವಕ್ತಾರ ನಜೀಬ್ ಡ್ಯಾನಿಶ್ ಹೇಳಿದ್ದಾರೆ. 
ಕಾರ್ ಬಾಂಬ್ ಸ್ಫೋಟದ ಹೊಣೆಯನ್ನು ಇನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ ಆಫ್ಗಾನಿಸ್ತಾನ ಭದ್ರತೆ ಪಡೆ ಕಂದಹಾರ್ ನಲ್ಲಿ ತಾಲಿಬಾನ್ ಉಗ್ರರ ಮೇಲೆ ದಾಳಿ ಮಾಡಿ 15 ಉಗ್ರರನ್ನು ಹತ್ಯೆಗೈದಿತ್ತು. ಇದಾದ ಒಂದು ದಿನದ ನಂತರ ಈ ಕಾರ್ ಬಾಂಬ್ ದಾಳಿ ನಡೆದಿದ್ದು ತಾಲಿಬಾನ್ ಉಗ್ರ ಸಂಘಟನೆಯೇ ಈ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ ಎಂದು ಡ್ಯಾನಿಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com