ಬರ್ಲಿನ್: ಹವಾಮಾನ ರಕ್ಷಣೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವುದು ಭಾರತ ಸಂಸ್ಕೃತಿಯ ಭಾಗವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಭಯೋತ್ಪಾದನೆಯನ್ನು ನಿಗ್ರಹಿಸಲು ಮತ್ತು ಸೈಬರ್ ಮತ್ತು ವಿಮಾನಯಾನ ಭದ್ರತೆಗೆ ಇದೇ ಸಂದರ್ಭದಲ್ಲಿ ಪ್ರಧಾನಿಯವರು ಸಹಕಾರಕ್ಕೆ ಕರೆ ನೀಡಿದರು.
ಭಯೋತ್ಪಾದನೆ ವಿರುದ್ಧ ಗಟ್ಟಿಯಾದ ಮತ್ತು ಸಾಮೂಹಿಕ ಕ್ರಮ ಅಗತ್ಯವಾಗಿದೆ. ಸೈಬರ್ ಭದ್ರತೆ ಮತ್ತು ವಾಯುಯಾನ ಭದ್ರತೆಯನ್ನು ಕೂಡ ಹೆಚ್ಚಿಸುವ ಅಗತ್ಯವಿದೆ ಎಂದು ಅವರು ಬರ್ಲಿನ್ ನಲ್ಲಿಂದು ಜಂಟಿ ಹೇಳಿಕೆ ನೀಡಿದ್ದಾರೆ.
ಜರ್ಮನಿಯ ಅತ್ಯಂತ ಉನ್ನತ ಮಟ್ಟದ ತಂತ್ರಜ್ಞಾನ ಕೌಶಲ್ಯ ಮತ್ತು ಭಾರತದ ಮಿತವ್ಯಯದ ಇಂಜಿನಿಯರಿಂಗ್ ವಿಶ್ವಕ್ಕೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ ಎಂದರು.
ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಅವರ ಜೊತೆ ದ್ವಿಪಕ್ಷೀಯ ಸಂಬಂಧ, ಮಾನವೀಯ ವಿಷಯಗಳು ಮತ್ತು ಪ್ರಾದೇಶಿಕ ಅಥವಾ ಜಾಗತಿಕ ಮಟ್ಟದ ವಿಷಯಗಳ ಕುರಿತು ಆರೋಗ್ಯಕರ ಚರ್ಚೆ ನಡೆಸಿರುವುದಾಗಿ ಪ್ರಧಾನಿ ಮೋದಿ ತಿಳಿಸಿದರು.