ವ್ಯಾಪಾರ ಕೊರತೆ ಮತ್ತು ನ್ಯಾಟೊ ಬಗ್ಗೆ ಜರ್ಮನಿ ವಿರುದ್ಧ ಡೊನಾಲ್ಡ್ ಟ್ರಂಪ್ ವಾಗ್ದಾಳಿ

ಜರ್ಮನಿಯೊಂದಿಗೆ ಯುಎಸ್ ವ್ಯಾಪಾರ ಕೊರತೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಾ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಜರ್ಮನಿಯೊಂದಿಗೆ ಯುಎಸ್ ವ್ಯಾಪಾರ ಕೊರತೆಯ ಬಗ್ಗೆ ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನ್ಯಾಟೊ ಮಿಲಿಟರಿ ಮೈತ್ರಿಗೆ ದೇಶ ಹೆಚ್ಚಿನ ಆದ್ಯತೆ ನೀಡಬೇಕೆಂದು ಹೇಳಿದ್ದಾರೆ.
ಜರ್ಮನಿ ಜೊತೆಗೆ ವ್ಯಾಪಾರ ಕೊರತೆ ದೊಡ್ಡದಾಗಿದೆ. ನ್ಯಾಟೊ ಮತ್ತು ಮಿಲಿಟರಿಗೆ ಅವರು ನೀಡಬೇಕಾಗಿರುವ ಮೊತ್ತಕ್ಕಿಂತ ಭಾರೀ ಕಡಿಮೆ ಹಣ ನೀಡುತ್ತಿದ್ದಾರೆ. ಇದು ಅಮೆರಿಕಾಕ್ಕೆ ಒಳ್ಳೆಯದಲ್ಲ. ಈ ವಾತಾವರಣ ಬದಲಾಗಬೇಕು ಎಂದು ಅವರು ಹೇಳಿದ್ದಾರೆ.
ಅಧ್ಯಕ್ಷರಾದ ನಂತರ ತಮ್ಮ ಮೊದಲ ಅಧಿಕೃತ ವಿದೇಶಿ ಪ್ರವಾಸ ಮುಗಿಸಿ ಬಂದ ಡೊನಾಲ್ಡ್ ಟ್ರಂಪ್ ಅವರು ಈ ಚ್ವೀಟ್ ಮಾಡಿದ್ದಾರೆ. ಸೌದಿ ಅರೇಬಿಯಾ, ಇಸ್ರೇಲ್, ಬ್ರುಸೆಲ್ಸ್ ಮತ್ತು ಜಿ 7 ಸಮಿತ್ ಗೆ ಇಟೆಲಿ ಪ್ರವಾಸ ಮುಗಿಸಿ ಟ್ರಂಪ್ ಭಾನುವಾರ ಸ್ವದೇಶಕ್ಕೆ ವಾಪಸಾಗಿದ್ದರು.
ಮೊನ್ನೆ ಭಾನುವಾರ ಬರ್ಲಿನ್ ನಲ್ಲಿ ಹೇಳಿಕೆ ನೀಡಿದ್ದ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಯುನೈಟೆಡ್ ಸ್ಟೇಟ್ಸ್ ಮತ್ತು ಬ್ರಿಟನ್ ಇನ್ನು ಮುಂದೆ ಸಂಪೂರ್ಣವಾಗಿ ವಿಶ್ವಾಸಾರ್ಹ ಪಾಲುದಾರರಾಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.
ಅಟ್ಲಾಂಟಿಕ್ ಸಂಬಂಧಗಳು ನಮಗೆ ಪ್ರಮುಖವಾದವುಗಳಾಗಿವೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ನಮ್ಮ ಭವಿಷ್ಯವನ್ನು ನಮ್ಮ ಕೈಗೆ ತೆಗೆದುಕೊಳ್ಳುವ ಕಾರಣಗಳಿವೆ. ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಯುರೋಪ್ ಸಕ್ರಿಯವಾಗಬೇಕಾಗಿದೆ ಎಂದು ಏಂಜೆಲಾ ಮರ್ಕೆಲ್ ಹೇಳಿದ್ದರು.
ಅಮೆರಿಕ ಅಧ್ಯಕ್ಷರ ದೂರದೃಷ್ಟಿ ಕೊರತೆಯ ಯೋಜನೆಗಳಿಂದಾಗಿ ಪಾಶ್ಚಾತ್ಯ ರಾಷ್ಟ್ರಗಳು ದುರ್ಬಲವಾಗಿದ್ದು ಯುರೋಪಿಯನ್ ಹಿತಾಸಕ್ತಿಗಳಿಗೆ ಧಕ್ಕೆಯನ್ನುಂಟುಮಾಡಿದೆ ಎಂದು ಜರ್ಮನ್ ವಿದೇಶಾಂಗ ಸಚಿವ ಸಿಗ್ಮರ್ ಗೇಬ್ರಿಯಲ್ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com