ಚೀನಾಗೆ ನಡುಕ ಹುಟ್ಟಿಸಿದೆ ಭಾರತವೂ ಇರುವ ಈ 4 ರಾಷ್ಟ್ರಗಳ ಸಭೆ!

ನ.13 ರಂದು ಮನಿಲಾದಲ್ಲಿ ನಡೆಯಲಿರುವ ಈಸ್ಟ್ ಏಷ್ಯಾ ಸಮ್ಮೇಳನದ ಪಾರ್ಶ್ವದಲ್ಲಿ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಸಭೆಗೆ ವೇದಿಕೆ ಸಜ್ಜುಗೊಂಡಿದ್ದು, ನೆರೆ ರಾಷ್ಟ್ರ ಚೀನಾಗೆ ಈಗಾಗಲೇ ನಡುಕ...
ಚೀನಾ
ಚೀನಾ
ಬೀಜಿಂಗ್: ನ.13 ರಂದು ಮನಿಲಾದಲ್ಲಿ ನಡೆಯಲಿರುವ ಈಸ್ಟ್ ಏಷ್ಯಾ ಶೃಂಗಸಭೆ ಪಾರ್ಶ್ವದಲ್ಲಿ ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ಸಭೆಗೆ ವೇದಿಕೆ ಸಜ್ಜುಗೊಂಡಿದ್ದು, ನೆರೆ ರಾಷ್ಟ್ರ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ. 
ಸುಮಾರು 10 ವರ್ಷಗಳ ನಂತರ 4 ರಾಷ್ಟ್ರಗಳ ನಡುವೆ ಇಂತಹದ್ದೊಂದು ಸಭೆ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯೂ ಭಾಗಿಯಾಗುವ ಸಾಧ್ಯತೆಗಳಿವೆ. ಈ ಸಭೆಯ ಬಗ್ಗೆ ಚೀನಾ ಹೇಳಿಕೆ ನೀಡಿದ್ದು, ಮೂರನೇ ರಾಷ್ಟ್ರದ ಹಿತಾಸಕ್ತಿಗಳಿಗೆ ಈ ಸಭೆಯಿಂದ ಧಕ್ಕೆ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ. 
ಭಾರತ, ಅಮೆರಿಕ, ಜಪಾನ್, ಆಸ್ಟ್ರೇಲಿಯಾ ರಾಷ್ಟ್ರಗಳ ನಡುವಿನ ಸಭೆ ಅಭಿವೃದ್ಧಿ, ಶಾಂತಿ, ಸಹಕಾರಗಳಿಗೆ ಪೂರಕವಾಗಿರಲಿದ್ದು, ಮತ್ತೊಂದು ರಾಷ್ಟ್ರಗಳ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಚೀನಾ ಹೇಳಿದೆ. 4 ರಾಷ್ಟ್ರಗಳ ಸಭೆಯಿಂದಾಗಿ ಚೀನಾಗೆ ಈಗಾಗಲೇ ಸಣ್ಣ ನಡುಕ ಪ್ರಾರಂಭವಾಗಿದೆ ಎಂದು ಚೀನಾದ ಈ ಹೇಳಿಕೆಯನ್ನು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com