ಪೋರ್ಚುಗೀಸ್ ತೀರದಲ್ಲಿ ಡೈನೋಸಾರ್ ಯುಗದ ತಿಮಿಂಗಿಲ ಪತ್ತೆ!

ವಿಜ್ಞಾನಿಗಳ ಮಹತ್ವದ ಶೋಧದಿಂದಾಗಿ ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಪತ್ತೆಯಾದ ತಿಮಿಂಗಲ
ಪತ್ತೆಯಾದ ತಿಮಿಂಗಲ
ನವದೆಹಲಿ: ವಿಜ್ಞಾನಿಗಳ ಮಹತ್ವದ ಶೋಧದಿಂದಾಗಿ ಪೋರ್ಚುಗೀಸ್ ತೀರದಲ್ಲಿ ಸಾಗರ ತಳದಲ್ಲಿ ಡೈನೋಸಾರ್ ಯುಗದ ತಿಮಿಂಗಿಲವೊಂದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಆಂಗ್ಲ ದೈನಿಕ ವಾಷಿಂಗ್ಟನ್ ಪೋಸ್ಟ್ ಈ ಬಗ್ಗೆ ವರದಿ ಮಾಡಿದ್ದು, ಪೋರ್ಚುಗೀಸ್ ತೀರದಲ್ಲಿ ಸುಮಾರು 710 ಅಡಿ ಆಳದಲ್ಲಿ ಈ ಬೃಹತ್ ತಿಮಿಂಗಲ ಪತ್ತೆಯಾಗಿದೆ ಎಂದು ವರದಿ ಮಾಡಿದೆ.  ವರದಿಯಲ್ಲಿರುವಂತೆ ಈ ತಿಮಿಂಗಲಕ್ಕೆ ಹಾವಿನ ತಲೆ ಇದ್ದು, ಇದರ ಬಾಯಲ್ಲಿ ಬರೊಬ್ಬರಿ 300 ಹಲ್ಲುಗಳಿವೆ ಎಂದು ಹೇಳಿದೆ. ಅಂತೆಯೇ ಈ ಜೀವಂತ ಪಳೆಯುಳಿಕೆ ಟೈರನ್ನೋಸಾರಸ್ ರೆಕ್ಸ್ ಹಾಗೂ ಟ್ರೈಸೆರಟಾಪ್ಸ್ ಇದ್ದಂತಹ  ಕಾಲದ್ದಾಗಿರಬೇಕು ಹಾಗೂ  80 ಲಕ್ಷ ವರ್ಷ ಹಳೆಯದ್ದಾಗಿರಬೇಕು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ವರದಿಯಲ್ಲಿರುವಂತೆ ಯೂರೋಪಿಯನ್ ಯೂನಿಯನ್ ಪ್ರಾಜೆಕ್ಟ್ ಸಂಶೋಧಕರು, ಈ ಹಾವಿನಂತಿರುವ ಗಂಡು ತಿಮಿಂಗಿಲವನ್ನು ಅಲ್ಗಾರ್ವೇ ತೀರದಲ್ಲಿ ಕಳೆದ ಬೇಸಿಗೆಯಲ್ಲಿ ಪತ್ತೆ ಹಚ್ಚಿದ್ದರು. ಈ ಜೀವಿ ಉದ್ದ, ಸಪೂರವಾಗಿದ್ದು  ಹಾವಿನಂತಹ ದೇಹಾಕೃತಿ ಹೊಂದಿದೆ ಹಾಗೂ 1.5 ಮೀಟರ್ ಉದ್ದವಿದೆ. ಈ ಜೀವಿಯನ್ನು 'ಖ್ಲಾಮಿಡೊಸೆಲ್ಖಸ್ ಎಂಗುನಿಯಸ್'  ಎಂದು ಹೆಸರಿಸಲಾಗಿದ್ದು, ಅದರ 300 ಹಲ್ಲುಗಳು 25 ಸಾಲುಗಳಲ್ಲಿ ಫ್ರಿಲ್ ಮಾದರಿ ಜೋಡಿಸಲ್ಪಟ್ಟಿವೆ.  ಈ ತಿಮಿಂಗಿಲಕ್ಕೆ ಆರು ಜತೆ ಗಿಲ್ ಅಥವಾ ಶ್ವಾಸಾಂಗವಿದ್ದು, ಅದರ ಅಂಚುಗಳು ನೆರಿಗೆಯಾಕಾರದಲ್ಲಿವೆ. ಸಾಗರ ತಳದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯದೆ ಈ ಜೀವಿ ಬೆಳೆದಿಲ್ಲ ಎಂದು ವಿಜ್ಞಾನಿಗಳು  ಅಭಿಪ್ರಾಯಪಟ್ಟಿದ್ದಾರೆ.
ಪೋರ್ಚುಗೀಸ್ ಇನ್‍ಸ್ಟಿಟ್ಯೂಟ್ ಫಾರ್ ದಿ ಸೀ ಎಂಡ್ ಎಟ್ಮಾಸ್ಫಿಯರ್ ಈ ಜೀವಿಯನ್ನು `ಲಿವಿಂಗ್ ಫಾಸ್ಸಿಲ್' ಎಂದು ಬಣ್ಣಿಸಿದೆ. ಆಸ್ಟ್ರೇಲಿಯಾ, ಜಪಾನ್ ಮತ್ತು ನ್ಯೂಜಿಲ್ಯಾಂಡಿನಲ್ಲಿ ಇತ್ತೀಚೆಗೆ ಪತ್ತೆ  ಹಚ್ಚಲಾದ ತಿಮಿಂಗಿಲಗಳ ಪಟ್ಟಿಗೆ  ಇದು ಸೇರಿದೆ. ಈ ಜೀವಿ ಸಾಮಾನ್ಯವಾಗಿ  ಸಾಗರ ತಳದಲ್ಲಿ 390ರಿಂದ 200 ಅಡಿಯಷ್ಟು ಕೆಳಗಿರುವುದರಿಂದ ಇದನ್ನು 19ನೇ ಶತಮಾನಕ್ಕಿಂತ ಮೊದಲು ಪತ್ತೆ ಹಚ್ಚಲಾಗಿಲ್ಲ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com