ಜಿಂಬಾಬ್ವೆ ನಿರ್ಗಮಿತ ಅಧ್ಯಕ್ಷ ರಾಬರ್ಟ್ ಮುಗಾಬೆ ಪತ್ನಿ ಬಂಧನ?

ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಉತ್ತರಾಧಿಕಾರಿ ಎಂದು ಘೋಷಿಸಿಕೊಂಡಿದ್ದ ಪತ್ನಿ ಗ್ರೇಸ್ ಮುಗಾಬೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಪತ್ನಿ ಗ್ರೇಸ್ ರೊಂದಿಗೆ ಅಧ್ಯಕ್ಷ ಮುಗಾಬೆ
ಪತ್ನಿ ಗ್ರೇಸ್ ರೊಂದಿಗೆ ಅಧ್ಯಕ್ಷ ಮುಗಾಬೆ
ಹರಾರೆ: ಕಳೆದ ವಾರ ನಡೆದ ಕ್ಷಿಪ್ರ ಸೇನಾಕ್ರಾಂತಿಯ ಬಳಿಕ ಅಧಿಕಾರ ಕಳೆದುಕೊಂಡು ಗೃಹ ಬಂಧನದಲ್ಲಿದ್ದ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ಇದೀಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅವರ ಉತ್ತರಾಧಿಕಾರಿ ಎಂದು  ಘೋಷಿಸಿಕೊಂಡಿದ್ದ ಪತ್ನಿ ಗ್ರೇಸ್ ಮುಗಾಬೆ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ ಮುಗಾಬೆ ಅವರ ಉತ್ತರಾಧಿಕಾರಿ ಎಂದು ಹೇಳಿಕೊಂಡು ಅಧಿಕಾರ ಹಿಡಿಯಲೆತ್ನಿಸಿದ ಮತ್ತು ದೇಶದ ರಾಜಕೀಯ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ ಆರೋಪ ಗ್ರೇಸ್ ಮೇಲೆ ಇದ್ದು, ಇದೇ ಕಾರಣಕ್ಕೆ  ಅವರನ್ನು ಬಂಧನಕ್ಕೊಳಪಡಿಸಿ ರಹಸ್ಯ ಪ್ರದೇಶದಲ್ಲಿರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಗ್ರೇಸ್ ದೇಶ ಬಿಟ್ಟು ತೆರಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಜಿಂಬಾಬ್ವೆ ಸೇನೆ ಇಂತಹ ಕ್ರಮ ಜರುಗಿಸಿರಬಹುದು ಎಂದು  ಹೇಳಲಾಗುತ್ತಿದೆ. 
ಇದಕ್ಕೆ ಇತ್ತೀಚಿಗೆ ಸಿಕ್ಕ ಕೆಲ ಉದಾಹರಣೆಗಳು ಪುಷ್ಟಿ ನೀಡುತ್ತಿದ್ದು, ಈ ಹಿಂದೆ ರಾಜಧಾನಿ ಹರಾರೆಯಲ್ಲಿ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷ ಮುಗಾಬೆ ಏಕಾಂಗಿಯಾಗಿ ಆಗಮಿಸಿದ್ದರು. ಈ ಬೆಳವಣಿಗೆ ಗ್ರೇಸ್ ಮುದಾಬೆ  ಅವರನ್ನು ಬಂಧನಕ್ಕೊಳಪಡಿಸಿರಬಹುದು ಎಂಬ ಶಂಕೆ ಮೂಡಿಸುತ್ತಿದೆ ಮುಗಾಬೆ ಹೋದಲೆಲ್ಲಾ ಜೊತೆಯಲ್ಲಿರುತ್ತಿದ್ದ ಗ್ರೇಸ್ ಸೇನಾಕ್ರಾಂತಿಯ ಬಳಿಕ ಎಲ್ಲಿ ನಾಪತ್ತೆಯಾದರು ಎಂಬ ಅಂಶ ತಿಳಿಯದಾಗಿದೆ. 
ಇತ್ತೀಚೆಗೆ ದೇಶದ ಜನತೆಯನ್ನುದ್ದೇಶಿಸಿ ಮುಗಾಬೆ ಮಾತನಾಡಿದ್ದಾಗಲೂ ಗ್ರೇಸ್ ಜೊತೆಯಲ್ಲಿ ಇರಲಿಲ್ಲವಂತೆ....
ಒಟ್ಟಾರೆ ಗ್ರೇಸ್ ಅವರ ಅಧಿಕಾರದ ಲಾಲಸೆ ಇದೀಗ ಅವರಿಗೆ ಸಂಕಷ್ಟವನ್ನು ತಂದೊಡ್ಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com