ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

37 ವರ್ಷಗಳ ಬಳಿಕ ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ ರಾಜೀನಾಮೆ

ಕೊನೆಗೂ ಜಿಂಬಾಬ್ವೆ ರಾಜಕೀಯ ಬಿಕ್ಕಟ್ಟು ನಿರೀಕ್ಷೆಯಂತೆಯೇ ತಾರಕಕ್ಕೇರಿದ್ದು,37 ವರ್ಷಗಳ ಕಾಲ ಸುಧೀರ್ಘ ಅಡಳಿತ ನಡೆಸಿದ್ದ ಅಧ್ಯಕ್ಷ ಮುಗಾಬೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
Published on
ಹರಾರೆ: ಕೊನೆಗೂ ಜಿಂಬಾಬ್ವೆ ರಾಜಕೀಯ ಬಿಕ್ಕಟ್ಟು ನಿರೀಕ್ಷೆಯಂತೆಯೇ ತಾರಕಕ್ಕೇರಿದ್ದು,37 ವರ್ಷಗಳ ಕಾಲ ಸುಧೀರ್ಘ ಅಡಳಿತ ನಡೆಸಿದ್ದ ಅಧ್ಯಕ್ಷ ಮುಗಾಬೆ  ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಆ ಮೂಲಕ ಮುಗಾಬೆ ಅವರ 37 ವರ್ಷಗಳ ಕಾಲ ಆಡಳಿತಕ್ಕೆ ಕೊನೆಗೂ ತೆರೆ ಬಿದ್ದಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಜಿಂಬಾಬ್ವೆ ಪಾರ್ಲಿಮೆಂಟ್ ನ ಸ್ಪೀಕರ್ ಹೇಳಿದ್ದಾರೆ. ಇನ್ನು  ತಮ್ಮ ಪತ್ನಿ ಗ್ರೇಸ್ ಅವರನ್ನೇ ಮುಂದಿನ ಉತ್ತರಾಧಿಕಾರಿಯನ್ನಾಗಿ ಮಾಡುವ ಮುಗಾಬೆ ಅವರ ನಿರ್ಧಾರಕ್ಕೆ ಅಲ್ಲಿನ ಜನರು ಸೇರಿದಂತೆ ಅಲ್ಲಿನ ಸೇನೆ ಕೂಡ ವಿರೋಧ ವ್ಯಕ್ತ ಪಡಿಸಿತ್ತು. ಇದೇ ಕಾರಣಕ್ಕೆ ಇತ್ತೀಚೆಗೆ ಮುಗಾಬೆ  ಅವರನ್ನು ಗೃಹ ಬಂಧನದಲ್ಲಿರಿಸಲಾಗಿತ್ತು. ಮುಗಾಬೆ ಅವರ ನಿರ್ಧಾರವನ್ನು ಸ್ವತಃ ಅವರದೇ ಪಕ್ಷದ ನಾಯಕರು ವಿರೋಧಿಸಿ ಅವರನ್ನು ಪಕ್ಷದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದು ಮಾತ್ರವಲ್ಲದೇ ಪಕ್ಷದಿಂದಲೇ  ವಜಾಗೊಳಿಸಿದ್ದರು.
ಈ ಬೆಳವಣಿಗೆ ಬೆನ್ನಲ್ಲೇ ಜಿಂಬಾಬ್ವೆ ಪಾರ್ಲಿಮೆಂಟ್ ದೇಶದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಿರಿ ಇಲ್ಲವೇ ವಾಗ್ದಂಡನೆ ಎದುರಿಸಿ” ಎಂದು ಇತ್ತೀಚೆಗೆ ಆಡಳಿತಾರೂಢ ಪಕ್ಷ ಮುಗಾಬೆಗೆ ಎಚ್ಚರಿಕೆ ನೀಡಿತ್ತು. ಆದರೆ ಈ ಎಚ್ಚರಿಕೆಯನ್ನು  ಮುಗಾಬೆ ಧಿಕ್ಕರಿಸಿದ್ದರು. ಇತ್ತೀಚೆಗಷ್ಟೇ ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಮುಗಾಬೆ ರಾಜೀನಾಮೆ ನೀಡುವ ಬಗ್ಗೆ ಏನನ್ನೂ ಹೇಳಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಮುಗಾಬೆ ವಿರುದ್ಧ ಪ್ರತಿಭಟನೆಗಳನ್ನು  ನಡೆಸಿದ್ದರು.
ಅಂತಿಮವಾಗಿ ಇದೀಗ ಮುಗಾಬೆ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಆ ಮೂಲಕ 37 ವರ್ಷಗಳ ವರ್ಣರಂಜಿತ ರಾಜಕೀಯಕ್ಕೆ ಮುಗಾಬೆ ತೆರೆ ಎಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com