ಬಲೂಚಿಸ್ಥಾನದ ಸೂಫಿ ಮಂದಿರದಲ್ಲಿ ಸ್ಫೋಟ: 12 ಸಾವು, ಹಲವರಿಗೆ ಗಾಯ

ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿರುವ ಸೂಫಿ ಮಂದಿರದ ಮೇಲೆ ಆತ್ಮಹತ್ಯಾ ಭಯೋತ್ಪಾದಕ ದಾಳಿ ನಡೆದಿದ್ದು, ಇತ್ತೀಚಿನ ಮಾಹಿತಿ ಪ್ರಕಾರ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ, 8 ಜನರಿಗೆ ಗಾಯಗಳುಂಟಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕರಾಚಿ: ಪಾಕಿಸ್ತಾನದ ಬಲೂಚಿಸ್ಥಾನ ಪ್ರಾಂತ್ಯದಲ್ಲಿರುವ ಸೂಫಿ ಮಂದಿರದ ಮೇಲೆ ಆತ್ಮಹತ್ಯಾ ಭಯೋತ್ಪಾದಕ ದಾಳಿ ನಡೆದಿದ್ದು, ಇತ್ತೀಚಿನ ಮಾಹಿತಿ ಪ್ರಕಾರ ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ, 8 ಜನರಿಗೆ ಗಾಯಗಳುಂಟಾಗಿದೆ. 
ಅಲ್ಲಿನ ಮಾಧ್ಯಮಗಳ ಪ್ರಕಾರ ದರ್ಗಾ ಫತೇಪುರ್ ಸೂಫಿ ಮಂದಿರದೊಳಗೆ ನುಗ್ಗಿದ ವ್ಯಕ್ತಿ ತನ್ನನ್ನು ಸ್ಫೋಟಿಸಿಕೊಂಡಿದ್ದಾನೆ. ಭಯೋತ್ಪಾದಕ ದಾಳಿಯಲ್ಲಿ ಕನಿಷ್ಠ 12 ಜನರು ಹತ್ಯೆಯಾಗಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿದೆ. ಘಟನೆಯನ್ನು ಬಲೂಚಿಸ್ಥಾನ ಸರ್ಕಾರದ ವಕ್ತಾರ ಅನ್ವರುಲ್-ಹಕ್-ಕಕರ್ ದೃಢಪಡಿಸಿದ್ದು, ಸೂಫಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಜನ ಸಂದಣಿ ನೆರೆದಿದ್ದಾಗ ದಾಳಿ ಸಂಭವಿಸಿದ್ದು ಇಬ್ಬರು ಪೊಲೀಸರಿಗೂ ಗಾಯಗೊಂಡಿದ್ದಾರೆ. 
ಗಾಯಾಳುಗಳನ್ನು ಸಿಬ್ಬಿ ಮತ್ತು ಡೇರಾ ಮುರಾದ್ ಜಮಾಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com