ಚೀನಿ ಸೈನಿಕರಿಗೆ 'ನಮಸ್ತೆ' ಪಾಠ: ನಿರ್ಮಲಾ ಸೀತಾರಾಮನ್ ನಡೆಗೆ ಚೀನಾ ಮಾಧ್ಯಮಗಳು ಫಿದಾ!

ಇತ್ತೀಚೆಗೆ ಇಂಡೋ-ಚೀನಾ ಗಡಿಗೆ ತೆರಳಿ ಉಭಯ ದೇಶದ ಸೈನಿಕರ ಉಭಯಕುಶಲೋಪರಿ ವಿಚಾರಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆ ಇದೀಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದು, ಸ್ವತಃ ಚೀನಾ ಮಾಧ್ಯಮಗಳೇ ನಿರ್ಮಾಲಾ ಸೀತಾರಾಮನ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀಜಿಂಗ್: ಇತ್ತೀಚೆಗೆ ಇಂಡೋ-ಚೀನಾ ಗಡಿಗೆ ತೆರಳಿ ಉಭಯ ದೇಶದ ಸೈನಿಕರ ಉಭಯಕುಶಲೋಪರಿ ವಿಚಾರಿಸಿದ್ದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆ ಇದೀಗ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದು,  ಸ್ವತಃ ಚೀನಾ ಮಾಧ್ಯಮಗಳೇ ನಿರ್ಮಾಲಾ ಸೀತಾರಾಮನ್ ನಡೆಯನ್ನು ತುಂಬು ಹೃದಯದಿಂದ ಸ್ವಾಗತಿಸಿವೆ.

ಉಭಯ ದೇಶಗಳ ನಡುವೆ ಭುಗಿಲೆದ್ದಿದ್ದ ಡೊಕ್ಲಾಂ ವಿವಾದ ಇಂಡೋ-ಚೀನಾ ನಡುವಿನ ಸೌಹಾರ್ಧ ಸಂಬಂಧ ಹಳಸುವಂತೆ ಮಾಡಿತ್ತು. ಉಭಯ ಸೈನಿಕರು ಗಡಿಯಲ್ಲಿ ಪರಸ್ಪರ ಕೈ ಮಿಲಾಯಿಸಿದ್ದು ಮಾತ್ರವಲ್ಲದೇ ಪರಸ್ಪರರು  ಕಲ್ಲು ತೂರಾಟ ಕೂಡ ಮಾಡಿಕೊಂಡಿದ್ದರು. ಈ ವಿಚಾರ ಉಭಯ ದೇಶಗಳು ಗಡಿಯಲ್ಲಿ ಸೇನೆ ನಿಯೋಜಿಸುವಷ್ಟರ ಮಟ್ಟಿಗೆ ಏರಿ ಇನ್ನು ಯುದ್ಧ ಸಂಭವಿಸಿಯೇ ಬಿಡುತ್ತದೆ ಎನ್ನುವ ಪರಿಸ್ಥಿತಿ ಏರ್ಪಟ್ಟಾಗ ಭಾರತ ರಾಜತಾಂತ್ರಿಕ  ಯೋಜನೆ ಫಲ ನೀಡಿ ಉಭಯ ದೇಶಗಳು ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದವು.

ಇಂದಿಗೂ ಡೊಕ್ಲಾಂ ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಇತ್ತೀಚೆಗೆ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗಡಿಗೆ ಭೇಟಿ ನೀಡಿ ಪರಿಸ್ಥಿತಿ ಶಾಂತಗೊಳಿಸುವ ಪ್ರಯತ್ನ ಮಾಡಿದ್ದಾರೆ. ಗಡಿಯಲ್ಲಿ  ಉಭಯ ದೇಶಗಳ ಸೈನಿಕರನ್ನು ವಿಚಾರಿಸುವ ಮೂಲಕ ಭಾರತ ಸೌಹಾರ್ಧ ರಾಷ್ಟ್ರ ಎಂದು ಸಾರುವ ಪ್ರಯತ್ನ ಮಾಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರ ಈ ನಡೆ ಇದೀಗ ಚೀನಾ ಮಾಧ್ಯಮಗಳಿಂದ ಪ್ರಶಂಸೆಗೆ  ಕಾರಣವಾಗಿದ್ದು, ನಿರ್ಮಲಾ ಅವರ ನಡೆ ಗಡಿಯಲ್ಲಿ ಹೃದಯ ಸ್ಪರ್ಶಿಯಾಗಿತ್ತು.

ಇದನ್ನೇ ಚೀನಾ ದೇಶದ ಸೈನಿಕರು ಮತ್ತು ಪ್ರಜೆಗಳು ಬಯಸುತ್ತಿದ್ದು, ಉಭಯ ದೇಶಗಳ ಗಡಿಯಲ್ಲಿ ಶಾಂತಿ ನೆಲೆಸಬೇಕು ಮತ್ತು ಉಭಯ ದೇಶಗಳ ಸೈನಿಕರು ಸೌಹಾರ್ಧದಿಂದ ಇರಬೇಕು. ಪ್ರಸ್ತುತ ಭಾರತ ಪ್ರದರ್ಶಿಸುವ ನಡೆ  ಭವಿಷ್ಯದಲ್ಲೂ ಮುಂದುವರೆದರೆ ಡೊಕ್ಲಾಂ ವಿವಾದಗಳ ಮತ್ತೆ ತಲೆದೋರುವುದಿಲ್ಲ. ಆದರೆ ಇದನ್ನು ಭಾರತೀಯ ಸರ್ಕಾರ ಅರ್ಥ ಮಾಡಿಕೊಳ್ಳಬೇಕಿದೆ. ಬೀಜಿಂಗ್ ಎಂದಿಗೂ ಭಾರತದೊಂದಿಗೆ ಸ್ನೇಹವನ್ನು ಬಯಸುತ್ತದೆಯೇ  ಹೊರತು ಯುದ್ಧವನ್ನಲ್ಲ ಎಂದು ಮಾಧ್ಯಮಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com