ಸೊಮಾಲಿಯಾದಲ್ಲಿ ಪ್ರಬಲ ಬಾಂಬ್ ಸ್ಫೋಟ: 276 ಸಾವು, 300 ಜನರಿಗೆ ಗಾಯ

ಸೋಮಾಲಿಯಾ ರಾಜಧಾನಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ 276 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಮಂಂದಿ ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ...
ಬಾಂಬ್ ಸ್ಫೋಟದ ಪರಿಣಾಮ ಕಟ್ಟಡ ಕುಸಿದುಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು
ಬಾಂಬ್ ಸ್ಫೋಟದ ಪರಿಣಾಮ ಕಟ್ಟಡ ಕುಸಿದುಬಿದ್ದಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಧಿಕಾರಿಗಳು

ಮೊಗಾದಿಶು: ಸೋಮಾಲಿಯಾ ರಾಜಧಾನಿಯಲ್ಲಿ ಪ್ರಬಲ ಬಾಂಬ್ ಸ್ಫೋಟ ಸಂಭವಿಸಿದ್ದು, ಸ್ಫೋಟದಲ್ಲಿ 276 ಮಂದಿ ಸಾವನ್ನಪ್ಪಿ 300ಕ್ಕೂ ಹೆಚ್ಚು ಮಂಂದಿ ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ. 

ಘೋರ ಕೃತ್ಯ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಸೋಮಾಲಿಯಾ ಸರ್ಕಾರ ಇದೊಂದು ರಾಷ್ಟ್ರೀಯ ದುರಂತವೆಂದು  ಘೋಷಿಸಿದೆ. ಅಲ್ಲದೆ, ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವ ಅಲ್ ಶಬಾಬ್ ಎಂಬ ಉಗ್ರ ಸಂಘಟನೆಯೇ ಈ ರಾಷ್ಟ್ರೀಯ ದುರಂತಕ್ಕೆ ಕಾರಣವೆಂದು ಆರೋಪಿಸಿದೆ. 
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹಿತ ಹಲವಾರು ಸರ್ಕಾರಿ ಸಚಿವಾಲಯಗಳು ಹಾಗೂ ಕಾರ್ಯಾಲಯಗಳು ಇರುವ ಜನದಟ್ಟನೆ ಹೊಂದಿರುವ ಬೀದಿಯಲ್ಲಿ ಟ್ರಕ್ ಬಾಂಬ್ ನ್ನು ಸ್ಫೋಟಿಸಲಾಗಿದ್ದು, ಪರಿಣಾಮ 276 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. ಪ್ರಬಲ ಬಾಂಬ್ ದಾಳಿಯನ್ನು ವಿಶ್ವಸಂಸ್ಥೆ ತೀವ್ರವಾಗಿ ಖಂಡಿಸಿದೆ. 

ದಾಳಿ ಕುರಿತಂತೆ ಸಚಿವ ಅಬ್ದಿರೆಹಮಾನ್ ಉಸ್ಮಾ ಅವರು ಟ್ವೀಟ್ ಮಾಡಿದ್ದು, ದಾಳಿಯೊಂದು ಅತ್ಯಂತ ಕ್ರೂರ ಹಾಗೂ ಅಮಾನುಷ ಬಾಂಬ್ ದಾಳಿಯಾಗಿದೆ ಎಂದು ಹೇಳಿದ್ದಾರೆ. 

ಟರ್ಕಿ ಮತ್ತು ಕೀನ್ಯಾ ಸೇರಿದಂತೆ ಹಲವು ದೇಶಗಳು ಸೋಮಾಲಿಯಾ ನೆವಿಗೆ ಬಂದಿದ್ದು. ವೈದ್ಯೀಯ ಹಾಗೂ ಇನ್ನಿತರೆ ಬಗೆಯ ನೆರವಿನ ಕೊಡುಗೆಗಳನ್ನು ನೀಡುತ್ತಿವೆ ಎಂದು ತಿಳಿದುಬಂದಿದೆ. 

ಮೊಗಾದಿಶುವಿನ ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿದ್ದು, 300 ಗಾಯಾಳುಗಳ ಪೈಕಿ ಹಲವ ಸ್ಥಿತಿ ಚಿಂತಾಜನಕವಾಗಿದೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿಗಳಿವೆ ಎಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com