ಭಾರತವನ್ನು ಕೇವಲ ಸುಧಾರಣೆ ಮಾಡುತ್ತಿಲ್ಲ, ಪರಿವರ್ತನೆ ಮಾಡುತ್ತಿದ್ದೇವೆ: ಪ್ರಧಾನಿ ಮೋದಿ

ನಾವು ಭಾರತವನ್ನು ಕೇವಲ ಸುಧಾರಣೆ ಮಾಡುತ್ತಿಲ್ಲ. ಭಾರತವನ್ನು ಪರಿವರ್ತನೆ ಮಾಡುತ್ತಿದ್ದೇವೆ. ನವ ಭಾರತವನ್ನು ಕಟ್ಟಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು...
ಮ್ಯಾನ್ಮಾರ್'ನಲ್ಲಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಮ್ಯಾನ್ಮಾರ್'ನಲ್ಲಿ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ
ಯಾಂಗೂನ್: ನಾವು ಭಾರತವನ್ನು ಕೇವಲ ಸುಧಾರಣೆ ಮಾಡುತ್ತಿಲ್ಲ. ಭಾರತವನ್ನು ಪರಿವರ್ತನೆ ಮಾಡುತ್ತಿದ್ದೇವೆ. ನವ ಭಾರತವನ್ನು ಕಟ್ಟಲಾಗುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮ್ಯಾನ್ಮಾರ್ ನಲ್ಲಿ ಬುಧವಾರ ಹೇಳಿದ್ದಾರೆ.
ಯಾಂಗೂನ್ ನ ಥುವುನ್ನಾ ಸ್ಟೇಡಿಯಂನಲ್ಲಿ ಭಾರತೀಯ ಮೂಲದ ನಾಗರೀಕರನ್ನು ಉದ್ದೇಶಿಸಿ ಮಾತನಾಡಿರುವ ಅವರು, ಬಡನತ, ಭಯೋತ್ಪಾದನೆ, ಭ್ರಷ್ಟಾಚಾರ, ಕೋಮುವಾದ, ಜಾತಿವಾದ ಮುಕ್ತ ಭಾರತವನ್ನು ಸೃಷ್ಟಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. 
ಇದೇ ವೇಳೆ ಸರ್ಕಾರದ ಹಲವು ಆರ್ಥಿಕ ಸುಧಾರಣಾ ಕ್ರಮಗಳನ್ನು ಪ್ರಸ್ತಾಪ ಮಾಡಿರುವ ಅವರು, ನಮಗೆ ರಾಜಕೀಯಕ್ಕಿಂತ ದೇಶ ಮೊದಲು. ಹೀಗಾಗಿಯೇ ನೋಟು ನಿಷೇಧ, ಜಿಎಸ್'ಟಿಯಂಥಹ ಕಠಿಣ ಕಾನೂನುಗಳನ್ನು ಜಾರಿಗೊಳಿಸಲಾಯಿತು ಎಂದು ಹೇಳಿದ್ದಾರೆ. 
ಇದಕ್ಕೂ ಮೊದಲು ಮ್ಯಾನ್ಮಾರ್ ನಾಯಕಿ ಆಂಗ್ ಸಾನ್ ಸೂ ಕಿ ಜೊತೆ ಪ್ರಧಾನಿ ಮೋದಿ ಮಾತುಕತೆ ನಡೆಸಿದರು. ಭಯೋತ್ಪಾದನೆ ವಿರೋಧಿ ಹೋರಾಟ ಮತ್ತು ಭದ್ರತಾ ಸಹಕಾರದ ಕುರಿತಂತೆ ಉಭಯ ನಾಯಕರು ಈ ಸಂದರ್ಭ ಒಮ್ಮತ ವ್ಯಕ್ತಪಡಿಸಿದರು. 1,25,000 ರೊಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ವಲಸೆ ಹೋಗುವುದಕ್ಕೆ ಕಾರಣವಾದ ರಖೀನೆ ರಾಜ್ಯದಲ್ಲಿ, ಸಮಸ್ಯೆ ಇತ್ಯರ್ಥಕ್ಕೆ ಮತ್ತು ದೇಶದ ಏಕತೆಗಾಗಿ ಸಂಬಂಧಪಟ್ಟ ಎಲ್ಲರೂ ಜೊತೆಗೂಡಿ ಪರಿಹಾರ ಕಂಡುಕೊಳ್ಳುವಂತೆ ಮೋದಿ ತಿಳಿಸಿದರು. 
ಮ್ಯಾನ್ಮಾರ್ ಎದುರಿಸುತ್ತಿರುವ ಸಮಸ್ಯೆಯನ್ನು ಭಾರತ ಅರ್ಥ ಮಾಡಿಕೊಳ್ಳಬಲ್ಲದು. ರಖೀನೆ ರಾಜ್ಯದಲ್ಲಿ ತೀವ್ರವಾದಿಗಳ ಹಿಂಸಾಚಾರ, ಅಮಾಯಕರ ಮತ್ತು ಭದ್ರತಾ ಪಡೆಗಳ ಪ್ರಾಣ ಹರಣದ ಕುರಿತ ಮ್ಯಾನ್ಮಾರ್ ಕಳವಳವನ್ನು ಭಾರತ ಹಂಚಿಕೊಳ್ಳುತ್ತಿದೆ ಎಂದು ಮೋದಿ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com