ಭಾರತದಲ್ಲಿ ಎಫ್-16 ಫೈಟರ್ ವಿಮಾನ ಉತ್ಪಾದನೆಗೆ ಟ್ರಂಪ್ ಬೆಂಬಲ!

ರಕ್ಷಣಾ ಸಹಕಾರ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉನ್ನತ ಭದ್ರತೆಯನ್ನು ಒದಗಿಸುವ ರಾಷ್ಟ್ರವಾಗಿರಬೇಕು ಎಂದು ಡೊನಾಲ್ಡ್ ಟ್ರಂಪ್ ಆಡಳಿತ....
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
ವಾಷಿಂಗ್ ಟನ್: ರಕ್ಷಣಾ ಸಹಕಾರ ಭಾರತದೊಂದಿಗಿನ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದ್ದು, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಉನ್ನತ ಭದ್ರತೆಯನ್ನು ಒದಗಿಸುವ ರಾಷ್ಟ್ರವಾಗಿರಬೇಕು ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕ ಕಾಂಗ್ರೆಸ್ ಗೆ ಹೇಳಿದೆ. 
ಅತ್ಯಾಧುನಿಕ ಫೈಟರ್ ಜೆಟ್ ಗಳಾದ ಎಫ್-18, ಎಫ್-16 ವಿಮಾನಗಳನ್ನು ಭಾರತದಲ್ಲಿ ತಯಾರಿಸುವುದನ್ನು ಬಲವಾಗಿ ಬೆಂಬಲಿಸುವುದಾಗಿ ಡೊನಾಲ್ಡ್ ಟ್ರಂಪ್ ಆಡಳಿತ ಅಮೆರಿಕ ಕಾಂಗ್ರೆಸ್ ಗೆ ಹೇಳಿಕೆ ನೀಡಿದ್ದು,  ಎಫ್-18, ಎಫ್-16 ವಿಮಾನಗಳನ್ನು ಭಾರತದಲ್ಲಿ ತಯಾರಿಸುವುದರಿಂದ ರಕ್ಷಣಾ ಕ್ಷೇತ್ರದಲ್ಲಿನ ಅಮೆರಿಕ-ಭಾರತದ ನಡುವಿನ ಸಂಬಂಧವೂ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. 
ಬೋಯಿಂಗ್ ಹಾಗೂ ಲಾಕ್ಹೀಡ್ ಮಾರ್ಟಿನ್ ಸಂಸ್ಥೆಗಳು ಭಾರತದಲ್ಲಿ ಎಫ್-16 ಫೈಟರ್ ವಿಮಾನಗಳನ್ನು ಉತ್ಪಾದಿಸಲು ಪ್ರಸ್ತಾವನೆ ನೀಡಿವೆ. ಈ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತದ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com