ಇರ್ಮಾ ಚಂಡಮಾರುತದ ನಡುವೆಯೂ ಒರ್ಲ್ಯಾಂಡೊದಲ್ಲಿ ಮದುವೆಯಾದ ರಕ್ಷಣಾ ಪಡೆ ಜೋಡಿ

ಲಾರೆನ್ ದುರ್ಹಮ್ ಬಿಳಿ ಉಡುಪಿನಲ್ಲಿ ಮದುಮಗಳಾಗಿ ಕಂಗೊಳಿಸಿ ಇದೇ ತಿಂಗಳ ಎರಡನೇ ವಾರಾಂತ್ಯ....
ಮದುವೆ ಬಳಿಕ ಒರ್ಲ್ಯಾಂಡೊದ ಆರೆಂಜ್ ಕೌಂಟಿ ಕನ್ವೆಷ್ಟನ್ ನಲ್ಲಿ ಸಮವಸ್ತ್ರದಲ್ಲಿ ಕ್ಯಾಮರಾಗೆ ಫೋಸ್ ನೀಡಿದ ಲಾರೆನ್ ದುರ್ಹಮ್ ಮತ್ತು ಮೈಕೆಲ್ ಡೇವಿಸ್ ದಂಪತಿ
ಮದುವೆ ಬಳಿಕ ಒರ್ಲ್ಯಾಂಡೊದ ಆರೆಂಜ್ ಕೌಂಟಿ ಕನ್ವೆಷ್ಟನ್ ನಲ್ಲಿ ಸಮವಸ್ತ್ರದಲ್ಲಿ ಕ್ಯಾಮರಾಗೆ ಫೋಸ್ ನೀಡಿದ ಲಾರೆನ್ ದುರ್ಹಮ್ ಮತ್ತು ಮೈಕೆಲ್ ಡೇವಿಸ್ ದಂಪತಿ
ಒರ್ಲಾಂಡೊ: ಲಾರೆನ್ ದುರ್ಹಮ್ ಬಿಳಿ ಉಡುಪಿನಲ್ಲಿ ಮದುಮಗಳಾಗಿ ಕಂಗೊಳಿಸಿ ಇದೇ ತಿಂಗಳ ಎರಡನೇ ವಾರಾಂತ್ಯದಲ್ಲಿ ತನ್ನ ಪ್ರಿಯಕರನಾದ ಮೈಕೆಲ್ ಡೇವಿಸ್ ನನ್ನು ಸಮುದ್ರ ತೀರದಲ್ಲಿ ಮದುವೆಯಾಗಲಿದ್ದಳು.
ಆದರೆ ಸಿದ್ದತೆ ಮಾಡಿಕೊಂಡಿದ್ದು ಒಂದು ಆಗಿದ್ದು ಮತ್ತೊಂದು. ತುಂಬಾ ಆಯಾಸದಿಂದ, ಮೇಕಪ್ ಇಲ್ಲದೆ ರಕ್ಷಣಾ ವಾಹನಗಳೊಂದಿಗೆ ಮತ್ತು ಅರೆಸೇನಾಪಡೆಯ ಸಹಾಯದೊಂದಿಗೆ ತನ್ನ ಪ್ರಿಯಕರ ಫ್ಲೋರಿಡಾದ ಮೈಕೆಲ್ ಡೇವಿಸ್ ನನ್ನು ತರಾತುರಿಯಲ್ಲಿ ಮದುವೆ ಮಾಡಿಕೊಳ್ಳಬೇಕಾಗಿ ಬಂತು.
ಲಾರೆನ್ ಮತ್ತು ಮೈಕೆಲ್ ಏರ್ ನ್ಯಾಶನಲ್ ಗಾರ್ಡ್ ನಲ್ಲಿ ಹಿರಿಯ ವಾಯು ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ಲೋರಿಡಾ, ಆರ್ಲೆಂಡೊದಲ್ಲಿ ಇರ್ಮಾ ಚಂಡಮಾರುತದಿಂದಾಗಿ ಭೀಕರ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಅಲ್ಲಿನ ನಿವಾಸಿಗಳ ರಕ್ಷಣಾ ಕಾರ್ಯದಲ್ಲಿ ಈ ಇಬ್ಬರು ಜೋಡಿ ನಿಯೋಜಿತಗೊಂಡಿದ್ದಾರೆ. ತಮ್ಮ ಪಟ್ಟಣವನ್ನು ಬಿಟ್ಟುಬಂದು ಒರ್ಲೆಂಡೊದ ಆರೆಂಜ್ ಕೌಂಟಿ ಕನ್ವೆನ್ಷನ್ ಸೆಂಟರ್ ನಲ್ಲಿ ಇರ್ಮಾ ಚಂಡಮಾರುತಕ್ಕೆ ಸಿಲುಕಿ ಹಾಕಿಕೊಂಡವರ ರಕ್ಷಣಾ ಕಾರ್ಯದರಲ್ಲಿ ನಿರತರಾಗಿದ್ದಾರೆ.
ನಿನ್ನೆ ಬೆಳಗ್ಗೆ ತಮ್ಮ ಸಹೋದ್ಯೋಗಿ ಮಿತ್ರರೊಂದಿಗೆ ಬೆಳಗ್ಗಿನ ತಿಂಡಿ ತಿನ್ನುವಾಗ ಈ ಜೋಡಿಯಲ್ಲಿ ತಮಾಷೆಗೆಂದು ಕೇಳಿದರಂತೆ, ನೀವೇಕೆ ಈ ಚಂಡಮಾರುತದಲ್ಲಿ ಮದುವೆಯಾಗಬಾರದು ಎಂದು.
ತಮಾಷೆಗೆಂದು ಆರಂಭಗೊಂಡ ಮಾತುಕತೆ ನಿಜವಾಯಿತು ಎನ್ನುತ್ತಾರೆ ದುರ್ಹಮ್. ಅಲ್ಲಿದ್ದವರೇ ಮಡಚುವ ಕುರ್ಚಿಗಳನ್ನು ತಂದರಂತೆ. ಟುಕ್ಸೆಡೊ ಟಿ ಶರ್ಟ್ ಗಳನ್ನು ಧರಿಸಿದರು. ಕೆಲವರು ಕೇಸರಿ ಬಣ್ಣದ ಹೂವುಗಳನ್ನು ನೀಡಿದರು. ಸೇನಾ ಸಿಬ್ಬಂದಿಯೇ ನೋಟರಿ ಮತ್ತು ಅಧಿಕಾರಿಗಳಾಗಿ ಜೋಡಿಯ ಮದುವೆಗೆ ಸಾಕ್ಷೀಭೂತರಾದರು.
ರಬ್ಬರ್ ರಕ್ಷಣಾ ದೋಣಿ ಮುಂದೆ ನಿಂತು ಮದುವೆಯಾಗಿರುವುದಕ್ಕೆ ಕುಟುಂಬಸ್ಥರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಗೊತ್ತಿಲ್ಲ. ದುರ್ಹಾಮ್ ಗಾಗಿ ಉದ್ದದ ಗೌನು ಮನೆಯಲ್ಲಿ ಕಾದು ಕುಳಿತಿದೆ. ಆದರೂ ಈ ಸಮವಸ್ತ್ರದಲ್ಲಿ ಮದುವೆಯಾಗುವುದು ಸಂತೋಷ ಎನಿಸಿದೆ ಎನ್ನುತ್ತಾರೆ 24 ವರ್ಷದ ದುರ್ಹಮ್. ಆಕೆಯ ಪತಿ ಡೇವಿಸ್ ಗೆ 26 ವರ್ಷಗಳು. ಡೇವಿಸ್ ಕಳೆದ 8 ವರ್ಷಗಳಿಂದ ಹಾಗೂ ದುರ್ಹಮ್ 3 ವರ್ಷಗಳಿಂದ ರಕ್ಷಣಾ ಪಡೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಸೇವೆಯಲ್ಲಿರುವಾಗ ಮದುವೆಯಾಗಿದ್ದು ಖುಷಿಯ ಸಂಗತಿ. ಇದನ್ನು ಮುಂದೆ ನಮ್ಮ ಮಕ್ಕಳಿಗೆ ಹೇಳಿ ಖುಷಿಪಡಬಹುದು ಎನ್ನುತ್ತಾರೆ ಡೇವಿಸ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com