ರೋಹಿಂಗ್ಯ ನಿರಾಶ್ರಿತರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಮ್ಯಾನ್ಮಾರ್‍ ಮೇಲೆ ಭಾರತ ಒತ್ತಡ: ಬಾಂಗ್ಲಾ

ಮ್ಯಾನ್ಮಾರ್‍ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ದೇಶ ತೊರೆಯುತ್ತಿರುವ ರೋಹಿಂಗ್ಯ ಮುಸ್ಲಿಂರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಭಾರತ...
ರೋಹಿಂಗ್ಯ ಮುಸ್ಲಿಂ
ರೋಹಿಂಗ್ಯ ಮುಸ್ಲಿಂ
ನವದೆಹಲಿ: ಮ್ಯಾನ್ಮಾರ್‍ನಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದಾಗಿ ದೇಶ ತೊರೆಯುತ್ತಿರುವ ರೋಹಿಂಗ್ಯ ಮುಸ್ಲಿಂರನ್ನು ಹಿಂದಕ್ಕೆ ಕರೆಸಿಕೊಳ್ಳಿ ಎಂದು ಭಾರತ ಮಾಯನ್ಮಾರ್ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದೆ ಎಂದು ಬಾಂಗ್ಲಾದೇಶ ಹೇಳಿದೆ. 
ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ರೋಹಿಂಗ್ಯ ಬಿಕ್ಕಟ್ಟಿನ ಮೇಲೆ ಬಾಂಗ್ಲಾದೇಶದೊಂದಿಗೆ ಐಕಮತ್ಯ ವ್ಯಕ್ತಪಡಿಸಿದ್ದು ದೇಶ ತೊರೆದ ನಿರಾಶ್ರಿತರನ್ನು ಹಿಂಪಡೆಯಲು ಭಾರತವು ಮ್ಯಾನ್ಮಾರ್ ಮೇಲೆ ಒತ್ತಡ ಹೇರುತ್ತಿದೆ ಎಂದು ಬಾಂಗ್ಲಾದೇಶ ಪ್ರಧಾನಮಂತ್ರಿಯ ಅಗ್ರ ಸಹಾಯಕನೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 25ರಂದು ಆರಂಭಗೊಂಡ ಹಿಂಸಾಚಾರದ ನಂತರ ಮ್ಯಾನ್ಮಾರ್ ನಿಂದ 3,79,000 ರೋಹಿಂಗ್ಯ ಮುಸ್ಲಿಂರು ಬಾಂಗ್ಲಾದೇಶದಲ್ಲಿ ನೆಲೆಸಿದ್ದು ಕಳೆದ ರಾತ್ರಿ ಕರೆ ಮಾಡಿದ ಸುಷ್ಮಾ ಸ್ವರಾಜ್ ಅವರು ಬಾಂಗ್ಲಾದೇಶಕ್ಕೆ ಬೆಂಬಲ ಸೂಚಿಸಿದ್ದಾರೆ. ಜತೆಗೆ ನಿರಾಶ್ರಿತರನ್ನು ಕೂಡಲೇ ಹಿಂಪಡೆಯುವಂತೆ ಮ್ಯಾನ್ಮಾರ್ ಮೇಲೆ ಒತ್ತಡ ಹಾಕುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ಉಪ ಪ್ರೆಸ್ ಕಾರ್ಯದರ್ಶಿ ನಜ್ರುಲ್ ಇಸ್ಲಾಂ ಅವರು ಸುದ್ದಿ ಸಂಸ್ಧೆಯೊಂದಕ್ಕೆ ತಿಳಿಸಿದ್ದಾರೆ. 
ರೋಹಿಂಗ್ಯ ಬಿಕ್ಕಟ್ಟು ಇದೀಗ ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಹೀಗಾಗಿ ಭಾರತವು ಮಯನ್ಮಾರ್ ಮೇಲೆ ದ್ವಿಪಕ್ಷೀಯವಾಗಿ ಮತ್ತು ಬಹುಪಕ್ಷೀಯ ಒತ್ತಡವನ್ನು ಹಾಕುತ್ತಿದ್ದು ಕೂಡಲೇ ಅಲ್ಪಸಂಖ್ಯಾತ ರೋಹಿಂಗ್ಯ ಮುಸ್ಲಿಂ ಮೇಲಿನ ಹಿಂಸಾಚಾರವನ್ನು ನಿಲ್ಲಿಸಬೇಕು ಜತೆಗೆ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ ನಿರಾಶ್ರಿತರನ್ನು ಹಿಂಪಡೆಯುವಂತೆ ಒತ್ತಡ ಹಾಕಲಾಗಿದೆ ಎಂದು ಹೇಳಿರುವುದಾಗಿ ನಜ್ರುಲ್ ಇಸ್ಲಾಂ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com