ಜಪಾನ್ ಮೇಲೆ ಮತ್ತೆ ಕ್ಷಿಪಣಿ ಉಡಾಯಿಸಿದ ಉತ್ತರ ಕೊರಿಯಾ; ಸೇನಾಬಲ ಪ್ರದರ್ಶಿಸಿದ ದಕ್ಷಿಣ ಕೊರಿಯಾ

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಯಮ ಉಲ್ಲಂಘಿಸಿ ಅಣ್ವಸ್ತ್ರ ಪರೀಕ್ಷೆ ಮಾಡಿದ್ದ ಉತ್ತರ ಕೊರಿಯಾ ಮತ್ತೆ ತನ್ನ ಉದ್ಧಟತನ ಪ್ರದರ್ಶಿಸಿದ್ದು, ಬೆಳ್ಳಂಬೆಳಗ್ಗೆ ಜಪಾನ್ ಮೇಲೆ ಕ್ಷಿಪಣಿ ಉಡಾಯಿಸಿ...
ಸೇನಾಬಲ ಪ್ರದರ್ಶಿಸಿದ ದಕ್ಷಿಣ ಕೊರಿಯಾ
ಸೇನಾಬಲ ಪ್ರದರ್ಶಿಸಿದ ದಕ್ಷಿಣ ಕೊರಿಯಾ

ಸೋಲ್: ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಯಮ ಉಲ್ಲಂಘಿಸಿ ಅಣ್ವಸ್ತ್ರ ಪರೀಕ್ಷೆ ಮಾಡಿದ್ದ ಉತ್ತರ ಕೊರಿಯಾ ಮತ್ತೆ ತನ್ನ ಉದ್ಧಟತನವನ್ನು ಪ್ರದರ್ಶಿಸಿದ್ದು, ಬೆಳ್ಳಂಬೆಳಗ್ಗೆ ಜಪಾನ್ ಮೇಲೆ ಕ್ಷಿಪಣಿಯನ್ನು ಉಡಾಯಿಸಿ ಅಟ್ಟಹಾಸ ಮೆರೆದಿದೆ.

ಇಂದು ಬೆಳಿಗ್ಗೆ ಉತ್ತರ ಕೊರಿಯಾದ ಪ್ಯೋಂಗ್ಯಾಂಗ್'ನಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೇತೃತ್ವದಲ್ಲಿ  ಸುನಾನ್ ಜಿಲ್ಲೆಯಿಂದ ಹಾರಿಸಿರುವ ಖಂಡಾಂತರ ಕ್ಷಿಪಣಿ, ಸುಮಾರು 3,700 ಕಿ.ಮೀಗಳ ದೂರ ಕ್ರಮಿಸಿ ಜಪಾನ್ ದೇಶದ ಹೊಕೈಡೊ ಬಂದರನ್ನು ದಾಟಿಕೊಂಡು ಹೋಗಿ ಪೆಸಿಫಿಕ್ ಸಾಗರದಲ್ಲಿ ಬಿದ್ದಿದೆ ಎಂದು ತಿಳಿದುಬಂದಿದೆ. 

ಉತ್ತರ ಕೊರಿಯಾ ಕ್ಷಿಪಣಿ ಹಾರಿಸಿರುವ ಬಗ್ಗೆ ಜಪಾನ್ ಹಾಗೂ ದಕ್ಷಿಣ ಕೊರಿಯಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಅಣ್ವಸ್ತ್ರ ಪರೀಕ್ಷೆಯ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಕಠಿಣ ನಿರ್ಬಂಧ ಹೇರಿದ್ದರೂ ಉತ್ತರ ಕೊರಿಯಾದ ಸರ್ವಾಧಿಕಾರಿಗೆ ಮಾತ್ರ ಇನ್ನೂ ಬುದ್ದಿ ಬಂದಿಲ್ಲದಂತೆ ವರ್ತಿಸುತ್ತಿದ್ದಾರೆ. ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಜಪಾನ್ ದೇಶವನ್ನು ಮುಳುಗಿಸಿ ಅಮೆಕರಿಕವನ್ನು ಬೂದಿ ಮಾಡುವುದಾಗಿ ಹೇಳಿದ್ದರು. ಕಿಮ್ ಜಾಂಗ್ ಉನ್ ಅವರ ದಿನಕ್ಕೊಂದು ವರ್ತನೆಯಿಂದಾಗಿ ಜಪಾನ್ ದೇಶಕ್ಕೆ ಇದೀಗ ನಡುಕ ಉಂಟಾಗಿದೆ. 

ಕೆಲ ವಾರಗಳ ಹಿಂದೆ ಕೂಡ ಉತ್ತರ ಕೊರಿಯಾ ಕ್ಷಿಪಣಿ ಉಡಾಯಿಸಿ ತೀವ್ರ ಖಂಡನೆಗಳಿಗೆ ಒಳಗಾಗಿತ್ತು. ಸೆ.3 ರ ಅಣ್ವಸ್ತ್ರ ಪರೀಕ್ಷೆ ಬಳಿಕ ಉತ್ತರ ಕೊರಿಯಾದ ಮೇಲೆ ವಿಶ್ವಸಂಸ್ಥೆ ಕಠಿಣ ನಿರ್ಬಂಧಗಳನ್ನು ಹೇರಿತ್ತು. ಆದರೂ ಇದಾಗುವುದಕ್ಕೂ ಉತ್ತರ ಕೊರಿಯಾ ಬಗ್ಗೆ ಇರುವುದು ಇದೀಗ ಅಮೆರಿಕ ಸೇರಿದಂತೆ ಅಂತರಾಷ್ಟ್ರೀಯ ಸಮುದಾಯಕ್ಕೆ ತಲೆನೋವು ಎದುರಾಗಿದೆ. 

ಉತ್ತರ ಕೊರಿಯಾ ಕ್ಷಿಪಣಿ ಉಡಾವಣೆ ಮಾಡಿರುವ ಬೆನ್ನಲ್ಲೇ ತುರ್ತು ಭದ್ತತಾ ಮಂಡಳಿ ಸಭೆ ಕರೆಯುವಂತೆ ವಿಶ್ವಸಂಸ್ಥೆಗೆ ದಕ್ಷಿಣ ಕೊರಿಯಾ ಮನವಿ ಮಾಡಿಕೊಂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com