ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ: ಜಪಾನ್ ಪ್ರಧಾನಿ ಶಿಂಜೊ ಅಬೆ ತೀವ್ರ ಖಂಡನೆ

ಪದೇ ಪದೇ ಉದ್ಧಟನ ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾ, ಜಪಾನ್ ಮೇಲೆ ನಡೆಸಿರುವ ಕ್ಷಿಪಣಿ ಪರೀಕ್ಷೆಯನ್ನು ಜಪಾನ್ ಪ್ರಧಾನಿ ಶಿಂಜೊ ಅಬೆಯವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ...
ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ
ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ
ಟೋಕಿಯೋ: ಪದೇ ಪದೇ ಉದ್ಧಟನ ಪ್ರದರ್ಶಿಸುತ್ತಿರುವ ಉತ್ತರ ಕೊರಿಯಾ, ಜಪಾನ್ ಮೇಲೆ ನಡೆಸಿರುವ ಕ್ಷಿಪಣಿ ಪರೀಕ್ಷೆಯನ್ನು ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆಯವರು ಶುಕ್ರವಾರ ತೀವ್ರವಾಗಿ ಖಂಡಿಸಿದ್ದಾರೆ. 
ಜಪಾನ್ ಮೇಲೆ ಉತ್ತರ ಕೊರಿಯಾ ನಡೆಸಿರುವ ಕ್ಷಿಪಣಿ ಪರೀಕ್ಷೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಕ್ಷಿಪಣಿ ಪರೀಕ್ಷೆಯನ್ನು ಸಹಿಸಲು ಸಾಧ್ಯವಿಲ್ಲ. ಉತ್ತರ ಕೊರಿಯಾದ ಕ್ಷಿಪಣಿ ಪರೀಕ್ಷೆ ವಿಶ್ವದ ಶಾಂತಿಯನ್ನು ಬೆದರಿಸುವ ಅಪಾಯಕಾರಿ ಹಾಗೂ ಪ್ರಚೋದನಕಾರಿ ಕ್ರಮವಾಗಿದೆ. ವಿಶ್ವಸಂಸ್ಥೆ ಕೂಡಲೇ ಉತ್ತರ ಕೊರಿಯಾ ಮೇಲೆ ದೃಢವಾಗಿ ನಿರ್ಬಂಧಗಳನ್ನು ಹೇರಬೇಕು ಎಂದು ಹೇಳಿದ್ದಾರೆ. 
ಕಳೆದ ಆ.26 ರಂದು ಉತ್ತರ ಕೊರಿಯಾ ಒಂದೇ ದಿನ ಮೂರು ಬಾಲಿಸ್ಟಿಕ್ ಕ್ಷಿಪಣಿಗಳನ್ನು ಜಪಾನ್ ಮೇಲೆ ಪ್ರಯೋಗ ಮಾಡಿತ್ತು. ಆದರೆ, ಆ ಮೂರು ಪ್ರಯೋಗಗಳು ವಿಫಲವಾಗಿದ್ದವು. ಉತ್ತರ ಕೊರಿಯಾದ ಈ ಪ್ರಯೋಗಕ್ಕೆ ಅಂತರಾಷ್ಟ್ರೀಯ ಸಮುದಾಯ ತೀವ್ರ ಖಂಡನೆ ವ್ಯಕ್ತಪಡಿಸಿತ್ತು. ಬಳಿಕ ವಿಶ್ವಸಂಸ್ಥೆ ಭದ್ರತಾ ಸಮಿತಿ ಉತ್ತರ ಕೊರಿಯಾ ಮೇಲೆ ನಿರ್ಬಂಧ ಹೇರಿತ್ತು. 
ಇದಕ್ಕೆ ಉತ್ತರ ಕೊರಿಯಾ ತೀವ್ರ ಖಂಡನೆ ವ್ಯಕ್ತಪಡಿಸಿತ್ತಲ್ಲದೇ, ಜಪಾನ್ ರಾಷ್ಟ್ರವನ್ನು ಮುಳುಗಿಸಿ, ಅಮೆರಿಕವನ್ನು ಬೂದಿ ಮಾಡುವುದಾಗಿ ಬೆದರಿಕೆ ಹಾಕಿತ್ತು. ಹೇಳಿಕೆಯ ಬೆನ್ನಲ್ಲೇ ಇಂದು ಬೆಳಿಗ್ಗೆ ಉತ್ತರ ಕೊರಿಯಾ ಜಪಾನ್ ಮೇಲೆ ಕ್ಷಿಪಣಿ ಉಡಾವಣೆ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com