ವಿಶ್ವಸಂಸ್ಥೆ ಸಾಮಾನ್ಯ ಸಭೆ: ನ್ಯೂಯಾರ್ಕ್ ತಲುಪಿದ ಸಚಿವೆ ಸುಷ್ಮಾ ಸ್ವರಾಜ್

ಸಂಯುಕ್ತ ರಾಷ್ಟ್ರದ 72ನೇ ವಿಶ್ವಸಂಸ್ಥೆ ಪ್ರಧಾನ ಅಧಿವೇಶನ ಸೋಮವಾರದಿಂದ ನಡೆಯಲಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನ್ಯೂಯಾರ್ಕ್ ತಲುಪಿದ್ದಾರೆಂದು ತಿಳಿದುಬಂದಿದೆ...
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನ್ಯೂಯಾರ್ಕ್: ಸಂಯುಕ್ತ ರಾಷ್ಟ್ರದ 72ನೇ ವಿಶ್ವಸಂಸ್ಥೆ ಪ್ರಧಾನ ಅಧಿವೇಶನ ಸೋಮವಾರದಿಂದ ನಡೆಯಲಿದ್ದು, ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನ್ಯೂಯಾರ್ಕ್ ತಲುಪಿದ್ದಾರೆಂದು ತಿಳಿದುಬಂದಿದೆ. 
ಸುಷ್ಮಾ ಸ್ವರಾಜ್ ಅವರು ಈಗಾಗಲೇ ಅಮೆರಿಕ ತಲುಪಿದ್ದು, ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆಯೇ ಸುಷ್ಮಾ ಅವರನ್ನು ಅಮೆರಿಕದಲ್ಲಿರುವ ಭಾರತೀಯ ರಾಯಭಾರಿ ನವತೇಜ್ ಸರ್ನಾ ಹಾಗೂ ವಿಶ್ವಸಂಸ್ಥೆಯನ್ನು ಪ್ರತಿನಿಧಿಸುವ ಭಾರತದ ಖಾಯಂ ಪ್ರತಿನಿಧಿ ಸಯ್ಯದ್ ಅಕ್ಬರುದ್ದೀನ್ ಅವರು ಸ್ವಾಗತಿಸಿದರು. 
ವಿಶ್ವಸಂಸ್ಥೆಯ ಈ ಅಧಿವೇಶನದಲ್ಲಿ ಭಾರತ ಮತ್ತು ಪಾಕಿಸ್ತಾನಕ್ಕೆ ಮುಖಾಮುಖಿಯಾಗಲಿದ್ದು, ಎರಡು ದೇಶಗಳ ನಡುವೆ ವಾಗ್ವಾದ ನಡೆಯುವ ಸಾಧ್ಯತೆಯಿದೆ. ಸಭೆಯಲ್ಲಿ ಬಲೂಚಿಸ್ತಾನ ಸ್ವಾತಂತ್ರ್ಯ, ಭಯೋತ್ಪಾದನೆ ಸೇರಿದಂತೆ ಇನ್ನಿತರೆ ವಿಚಾರಗಳ ಕುರಿತಂತೆ ಮಾತುಕತೆ ನಡೆಯುವ ಸಾಧ್ಯಗಳಿವೆ. 
ಸಂಯುಕ್ತ ರಾಷ್ಟ್ರದ 72ನೇ ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದ್ದು, ವಾರದವರೆಗೂ ನಡೆಯಲಿದೆ. ಜಿ-77, ಎಸ್ ಯು, ಜಿ-4 ಮತ್ತು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿತಾ) ಸಭೆಗಳೂ ಸೇರಿಗಳೂ ಸೇರಿದಂತೆ 15ಕ್ಕೂ ಹೆಚ್ಚು ಸಮಾವೇಶಗಳಲ್ಲಿ ಸುಷ್ಮಾ ಅವರು ಪಾಲ್ಗೊಳ್ಳುವರು. ಈ ಮಹಾ ಅಧಿವೇಶನದಲ್ಲಿ ವಿಶ್ವದ ಮಹಾನ್ ನಾಯಕರು ಪಾಲ್ಗೊಳ್ಳಲಿದ್ದಾರೆ. 7 ದಿನಗಳ ಕಾಲ ನಡೆಯುವ ಈ ಸಭೆಯಲ್ಲಿ ವಿವಿಧ ರಾಷ್ಟ್ರಗಳೊಂದಿಗೆ 20 ದ್ವಿಪಕ್ಷೀಯ ಹಾಗೂ ತ್ರಿಪಕ್ಷೀಯ ಸಭೆಗಳನ್ನು ಸುಷ್ಮಾ ಅವರು ನಡೆಸಲಿದ್ದಾರೆಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com