ಪ್ಯಾರಿಸ್ ಒಪ್ಪಂದ ಮೀರಿ ಭಾರತ ಪರಿಸರ ರಕ್ಷಣೆ ಕಾಳಜಿ ವಹಿಸಲಿದೆ: ಸುಷ್ಮಾ ಸ್ವರಾಜ್

ಪ್ಯಾರಿಸ್ ಒಪ್ಪಂದವನ್ನು ಮೀರಿ ಕೆಲಸ ಮಾಡಲು ಭಾರತ ಬಯಸುತ್ತದೆ ಎಂದು ವಿದೇಶಾಂಗ ಸಚಿವೆ ...
ಸಭೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ಸಭೆಯಲ್ಲಿ ಭಾಗವಹಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್
ನ್ಯೂಯಾರ್ಕ್: ಪ್ಯಾರಿಸ್ ಒಪ್ಪಂದವನ್ನು ಮೀರಿ ಕೆಲಸ ಮಾಡಲು ಭಾರತ ಬಯಸುತ್ತದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಅವರು ನಿನ್ನೆ ನ್ಯೂಯಾರ್ಕ್ ನಲ್ಲಿ ಹವಾಮಾನ ಬದಲಾವಣೆ ಕುರಿತು ವಿಶ್ವಸಂಸ್ಥೆ ಕಾರ್ಯದರ್ಶಿ ಜನರಲ್ ಆಂಟೊನಿಯೊ ಗುಟೆರ್ರೆಸ್ ಅವರೊಂದಿಗೆ ಕೆಲವು ಆಯ್ದ ನಾಯಕರೊಂದಿಗೆ ಸಭೆ ನಡೆಸಿದ ನಂತರ ಈ ಹೇಳಿಕೆ ನೀಡಿದರು.
ಪರಿಸರ ಮತ್ತು ತಾಯ್ನಾಡಿನ ರಕ್ಷಣೆ ಮೇಲೆ ನಂಬಿಕೆ ಇರಬೇಕಾಗಿದ್ದು ಅದಕ್ಕೆ ಒತ್ತು ನೀಡುವ ಅವಶ್ಯಕತೆಯಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಭಾರತ ಈ ನಿಟ್ಟಿನಲ್ಲಿ ತನ್ನ ಕೆಲಸವನ್ನು ಮುಂದುವರಿಸಲಿದ್ದು ಪ್ಯಾರಿಸ್ ಒಪ್ಪಂದವನ್ನು ಮೀರಿ ಕಾರ್ಯನಿರ್ವಹಿಸಲಿದೆ. ಮುಂದಿನ ಜನಾಂಗ ಉತ್ತಮ ಜೀವನ ನಡೆಸುವುದು ನಮ್ಮ ಬದ್ಧತೆಯಾಗಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಸೌರ ಮೈತ್ರಿ ವಿಷಯದಲ್ಲಿ ವಿಶ್ವಸಂಸ್ಥೆಯ ಭದ್ರತಾ ಪಡೆ ಮತ್ತು ಸಂಬಂಧಪಟ್ಟ ವಿಶ್ವಸಂಸ್ಥೆಯ ಸಂಸ್ಥೆಗಳ ಜೊತೆಗೆ ಕೆಲಸ ಮಾಡಲು ಭಾರತ ಸಿದ್ಧವಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com