ಡೊನಾಲ್ಡ್ ಟ್ರಂಪ್, ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ: ರಷ್ಯಾ

ಅಣ್ವಸ್ತ್ರ ಪರೀಕ್ಷೆ ಹಿನ್ನಲೆಯಲ್ಲಿ ಪರಸ್ಪರ ಕಚ್ಚಾಡುತ್ತಿರುವ ಉತ್ತರಕೊರಿಯಾ, ಅಮೆರಿಕ ವಿರುದ್ಧ ರಷ್ಯಾ ಕಿಡಿ ಕಾರಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಾಸ್ಕೋ: ಅಣ್ವಸ್ತ್ರ ಪರೀಕ್ಷೆ ಹಿನ್ನಲೆಯಲ್ಲಿ ಪರಸ್ಪರ ಕಚ್ಚಾಡುತ್ತಿರುವ ಉತ್ತರಕೊರಿಯಾ, ಅಮೆರಿಕ ವಿರುದ್ಧ ರಷ್ಯಾ ಕಿಡಿ ಕಾರಿದ್ದು, ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ ಆಡುತ್ತಿದ್ದಾರೆ  ಎಂದು ಕಿಡಿಕಾರಿದೆ.
ಇತ್ತೀಚೆಗಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಟ್ವೀಟ್ ಸಮರ ಕುರಿತಂತೆ ಮಾತನಾಡಿರುವ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್  ಅವರು, ಡೊನಾಲ್ಡ್ ಟ್ರಂಪ್ ಹಾಗೂ ಕಿಮ್ ಜಾಂಗ್ ಉನ್ ಶಿಶು ವಿಹಾರದಲ್ಲಿರುವ ಮಕ್ಕಳಂತೆ ಆಡುತ್ತಿದ್ದಾರೆ. ಇಬ್ಬರೂ ಪರಸ್ಪರ ಕಚ್ಚಾಡುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ ಉತ್ತರ ಕೊರಿಯಾದ ಅಣ್ವಸ್ತ್ಪ ಪರೀಕ್ಷೆಯನ್ನು ಟೀಕಿಸಿದ ಲಾವ್ರೊವ್, ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆ ಸಮರ್ಥನೀಯವಲ್ಲ. ಹಾಗೆಂದು ಅಣ್ವಸ್ತ್ರ ಪರೀಕ್ಷೆ ನಡೆಸಿದ ಉತ್ತರ ಕೊರಿಯಾ ವಿರುದ್ಧ ಯುದ್ಧ ಸಾರುವುದೂ  ಸರಿಯಲ್ಲ. ಉಭಯ ದೇಶಗಳ ನಾಯಕರು ಮೊದಲು ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಬೇಕಿದೆ. ಪ್ರಸ್ತುತ ಪರಿಸ್ಥಿತಿ ಬಿಗಡಾಯಿಸಿದೆಯಾದರೂ ರಾಜತಾಂತ್ರಿಕವಾಗಿ ಸಮಸ್ಯೆ ಪರಿಹಾರಕ್ಕೆ ಇನ್ನೂ ಅವಕಾಶವಿದೆ. ಹೀಗಿರುವಾಗ  ಉಭಯ ದೇಶಗ ನಡೆ ಸರಿಯಲ್ಲ ಎಂದು ಲಾವ್ರೋವ್ ಹೇಳಿದ್ದಾರೆ.

ಇದೇ ವೇಳೆ ಉತ್ತರ ಕೊರಿಯಾದ ಆಪ್ತರಾಷ್ಟ್ರವಾಗಿರುವ ಚೀನಾದೊಂದಿಗೆ ಸೇರಿ ತಾವು ರಾಜತಾಂತ್ರಿಕ ಪರಿಹಾರಕ್ಕೆ ಮುಂದಾಗಿದ್ದೇವೆ. ಅಮೆರಿಕ ಮತ್ತು ಉತ್ತರ ಕೊರಿಯಾ ಚಿಕ್ಕಮಕ್ಕಳಂತೆ ಕಚ್ಚಾಡುವ ಬದಲು ಸಮಂಜಸವಾದ  ವಿಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಲಾವ್ರೋವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com