ಅಮೆರಿಕಾಗೆ ಸೆಡ್ಡು ಹೊಡೆದ ಇರಾನ್ ನಿಂದ ಹೊಸ ಕ್ಷಿಪಣಿ ಪರೀಕ್ಷೆ!

ಇರಾನ್‌ ಜತೆಗಿನ ಅಣ್ವಸ್ತ್ರ ವಹಿವಾಟನ್ನು ನಿಲ್ಲಿಸಲು ಸಿದ್ಧ ಎಂದು ಅಮೆರಿಕಾ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆದಿರುವ ಇರಾನ್‌ ಇಂದು ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ.......
ಕ್ಷಿಪಣಿ ಪರೀಕ್ಷೆ (ಸಂಗ್ರಹ ಚಿತ್ರ)
ಕ್ಷಿಪಣಿ ಪರೀಕ್ಷೆ (ಸಂಗ್ರಹ ಚಿತ್ರ)
ಟೆಹರಾನ್: ಇರಾನ್‌ ಜತೆಗಿನ ಅಣ್ವಸ್ತ್ರ ವಹಿವಾಟನ್ನು ನಿಲ್ಲಿಸಲು ಸಿದ್ಧ ಎಂದು ಅಮೆರಿಕಾ ನೀಡಿದ ಎಚ್ಚರಿಕೆಗೆ ಸಡ್ಡು ಹೊಡೆದಿರುವ ಇರಾನ್‌ ಇಂದು ಮಧ್ಯಮ ವ್ಯಾಪ್ತಿಯ ಅಣು ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ.
ಇರಾನ್‌ ನಿನ್ನೆಯಷ್ಟೇ ಉನ್ನತ ಮಟ್ಟದ ಮಿಲಿಟರಿ ಪರೇಡ್‌ನ‌ಲ್ಲಿ ಪ್ರದರ್ಶಿಸಿದ್ದ ಖೋರಮ್‌ ಶಹರ್‌ ಕ್ಷಿಪಣಿಯನ್ನು ಪ್ರಯೋಗಾರ್ಥವಾಗಿ ಯಶಸ್ವಿಯಾಗಿ ಪರೀಕ್ಷಿಸಿದ ವಿಡಿಯೋ ಚಿತ್ರವನ್ನು ಇರಾನ್‌ ಸರ್ಕಾರಿ ಟಿವಿ ವಾಹಿನಿ ಪ್ರಸಾರ ಮಾಡಿದೆ.  ಹಾರಾಟ ನಿರತವಾಗಿದ್ದ ವಿಮಾನ ದಿಂದ ಚಿತ್ರೀಕರಿಸಿಕೊಂಡ ಕ್ಷಿಪಣಿ ಪರೀಕ್ಷಾ ವಿಡಿಯೋವನ್ನು ಇರಾನ್‌ ಸರ್ಕಾರಿ ಟಿವಿಯಲ್ಲಿ ಪ್ರಸಾರಿಸಲಾಗಿದೆ. 
ಆದರೆ ಈ ಕ್ಷಿಪಣಿ ಪ್ರಯೋಗದ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. 
ಉತ್ತರ ಕೊರಿಯಾ, ಇರಾನ್ ಅಣು ಕ್ಷಿಪಣಿ ಪರೀಕ್ಷೆಗಳಿಂದಾಗಿ ಅಮೆರಿಕಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳ ಸುರಕ್ಷತೆ ಕುರಿತು ಕಳವಳಪಡುವಂತಾಗಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com