ಫೋಟೋ ನೆಪದಲ್ಲಿ ಭಾರತದ ಪೆಲೆಟ್ ಗನ್ ಬಳಕೆ ಮುಚ್ಚಿಡಲಾಗದು: ಪಾಕಿಸ್ತಾನ

ವಿಶ್ವಸಂಸ್ಥೆಯಲ್ಲಿ ತನ್ನಿಂದಾದ ಫೋಟೋ ಪ್ರಮಾದವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಸುತ್ತಿರುವ 'ನಿರ್ವಿವಾದ ವಾಸ್ತವ'ವನ್ನು ಮುಚ್ಚಿಡಲು ಸಾಧ್ಯವಿಲ್ಲ...
ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸುವ ಭರದಲ್ಲಿ ಕಾಶ್ಮೀರ ಬದಲು ಪ್ಯಾಲೆಸ್ತೀನಿ ಮಹಿಳೆಯ ಫೋಟೋ ತೋರಿಸಿದ ಪಾಕಿಸ್ತಾನ
ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸುವ ಭರದಲ್ಲಿ ಕಾಶ್ಮೀರ ಬದಲು ಪ್ಯಾಲೆಸ್ತೀನಿ ಮಹಿಳೆಯ ಫೋಟೋ ತೋರಿಸಿದ ಪಾಕಿಸ್ತಾನ
ಇಸ್ಲಾಮಾಬಾದ್: ವಿಶ್ವಸಂಸ್ಥೆಯಲ್ಲಿ ತನ್ನಿಂದಾದ ಫೋಟೋ ಪ್ರಮಾದವನ್ನು ಮುಂದಿಟ್ಟುಕೊಂಡು ಭಾರತೀಯ ಸೇನೆ ಕಾಶ್ಮೀರದಲ್ಲಿ ಪೆಲೆಟ್ ಗನ್ ಬಳಸುತ್ತಿರುವ 'ನಿರ್ವಿವಾದ ವಾಸ್ತವ'ವನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. 
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಖಾತೆ ವಕ್ತಾರ ನೆಫೆಸ್ ಜಕಾರಿಯಾ ಅವರು, ಕಾಶ್ಮೀರಿಗಳ ಕುರುಡುತನಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಆರೋಪಿಸಿದ್ದಾರೆ. 

ಪೆಲೆಟ್ ಗನ್ ಗಳನ್ನು ಬಳಿ ಭಾರತ ಸಾವಿರಾರು ಕಾಶ್ಮೀರಿಗರನ್ನು ಗಾಯಗೊಳಿಸಿದೆ. 80 ಕಾಶ್ಮೀರಿಗರು ಸಂಪೂರ್ಣವಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. 200 ಕಾಶ್ಮೀರಿಗರ ಒಂದು ಕಣ್ಣು ಗಾಯಗೊಂಡಿದೆ. ಇದು ನಿರ್ವಿವಾದವಾದ ಸತ್ಯವಾಗಿದದ್ದು, ಈ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ. ಅಭಿವೃದ್ಧಿ ನೆರವಿನ ಹೆಸರಿನಲ್ಲಿ ಭಾರತ ಆಫ್ಘಾನಿಸ್ತಾನದಲ್ಲಿ  ಸುಲಿಗೆ ಮಾಡುತ್ತಿದ್ದು, ತನ್ನ ದೇಶದ ಮಣ್ಣನ್ನು ಬಳಸಿಕೊಂಡು ಪಾಕಿಸ್ತಾನದೊಳಗೆ ವಿನಾಶಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. 

ಈ ಬಗ್ಗೆ ನಮ್ಮ ಬಳಿ ಸಾಕ್ಷ್ಯಾಧಾರಗಳಿದ್ದು, ಈ ಸಾಕ್ಷ್ಯಗಳನ್ನು ಅಮೆರಿಕ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆಫ್ಘಾನಿಸ್ತಾನದ ಅಧಿಕಾರಿಗಳಿಗೆ ನೀಡದ್ದೇವೆಂದು ಜಕಾರಿಯಾ ತಿಳಿಸಿದ್ದಾರೆ. 

ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಭಾರತವನ್ನು ಟೀಕಿಸುವ ಭರದಲ್ಲಿ ಕಾಶ್ಮೀರ ಬದಲು ಪ್ಯಾಲೆಸ್ತೀನಿ ಮಹಿಳೆಯ ಫೋಟೋ ತೋರಿಸಿದ ಪಾಕಿಸ್ತಾನ ತೀವ್ರ ಮುಖಭಂಗವನ್ನು ಅನುಭವಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com