ನಿಷೇಧಿತ ನೋಟು ವಿನಿಮಯಕ್ಕೆ ಅವಕಾಶ ನೀಡಿ, ಭಾರತಕ್ಕೆ ನೇಪಾಳ ಒತ್ತಾಯ

ಭಾರತದಲ್ಲಿ ಉನ್ನತ ಮೌಲ್ಯದ ನೋಟು ನಿಷೇಧವಾದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ನೋಟು ನಿಷೇಧಿಸಬೇಕಾಗಿದೆ ಎಂದು.........
ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ
ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ
Updated on
ಕಟ್ಮಂಡು: ಭಾರತದಲ್ಲಿ ಉನ್ನತ ಮೌಲ್ಯದ ನೋಟು ನಿಷೇಧವಾದ ಹಿನ್ನೆಲೆಯಲ್ಲಿ ನೇಪಾಳದಲ್ಲಿ ಲಕ್ಷಾಂತರ ಡಾಲರ್ ಮೌಲ್ಯದ ನೋಟು ನಿಷೇಧಿಸಬೇಕಾಗಿದೆ ಎಂದು ನೇಪಾಳ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಹೇಳಿದ್ದಾರೆ.
ನೆರೆರಾಷ್ಟ್ರದೊಡನೆ ಉತ್ತಮ ಬಾಂಧವ್ಯ ಸುಧಾರಣೆಗಾಗಿ ಈ ವಾರ ಭಾರತಕ್ಕೆ ಆಗಮಿಸುವ ನೇಪಾಳ ಪ್ರಧಾನಿ :ಒಲಿ ಈ ಸಂಬಂಧ ಮಾತುಕತೆ ನದೆಸುವವರಿದ್ದಾರೆ. 
2016 ರಲ್ಲಿ ಭಾರತವು 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ನಿಷೇಧಿಸಿತ್ತು. ಆ ಬಳಿಕ ನೇಪಾಳದಲ್ಲಿ  146 ಮಿಲಿಯನ್ ಮೌಲ್ಯದ ಹಳೆಯ ಭಾರತೀಯ ಬ್ಯಾಂಕ್ ನೋಟುಗಳ ವಿನಿಮಯ ಆಗಬೇಕಿದೆ. ಇದನ್ನು ಭಾರತ ಹಾಗೂ ನೇಪಾಳ ಹೇಗೆ ಒಪ್ಪಿಕೊಳ್ಳಲಿದೆ ಎನ್ನುವುದನ್ನು ಈ ಭೇಟಿ ನಿರ್ಧರಿಸಲಿದೆ.
ಭಾರತದಲ್ಲಿ  ಲೆಕ್ಕವಿಲ್ಲದಷ್ಟು ಅಕ್ರಮ ಸಂಪತ್ತನ್ನು, ನಕಲಿ ನೋಟಿನ ಹಾವಳಿ ತಡೆಯುವ ಜತೆಗೆ ಉಗ್ರಗಾಮಿಗಳಿಗೆ ಸಿಗಬಹುದಾದ ಹಣಕಾಸು ನೆರವನ್ನು ನಿಲ್ಲಿಸುವ ಸಲುವಾಗಿ ಭಾರತ ಈ ಕ್ರಮಕ್ಕೆ ಮುಂದಾಗಿತ್ತು. ಆದರೆ ಇದೇ ವೇಳೆ ಭಾರತದ ಗಡಿ ರಾಷ್ಟ್ರಗಳಾದ ನೇಪಾಳ ಹಾಗೂ ಭೂತಾನ್ ಅರ್ಥವ್ಯವಸ್ಥೆ ಮೇಲೆಯೂ ಭಾರತದ ಈ ಕ್ರಮ ಪರಿಣಾಮ ಬೀರಿದೆ. ಅಲ್ಲಿ ಭಾರತೀಯ ನೋಟುಗಳ ವ್ಯಾಪಕ ಬಳಕೆ ಆಗುತ್ತದೆ.
"ಭಾರತದ ನೋಟು ನಿಷೇಧ ಕ್ರಮವು ನೇಪಾಳಿ ಪ್ರಜೆಗಳಿಗೆ ಹಾನಿಕರವಾಗಿ ಪರಿಣಮಿಸಿದೆ. ಈ ವಾರದ ಭೇಟಿಯಲ್ಲಿ ನಾನು ಭಾರತೀಯ ನಾಯಕರೊಡನೆ ಈ ಸಂಬಂಧ ಚರ್ಚೆ ನಡೆಸಲಿದ್ದೇನೆ. ಈ ಸಮಸ್ಯೆಯನ್ನು ಬಗೆಹರಿಸಲು ಮನವಿ ಮಾಡುತ್ತೇನೆ "ಎಂದು ಒಲಿ ನೇಪಾಳಿ ಸಂಸತ್ತಿಗೆ ತಿಳಿಸಿದ್ದಾರೆ.
ಭಾರತವು ನೇಪಾಳದ ಅತಿ ದೊಡ್ಡ ವ್ಯಾಪಾರಿ ಪಾಲುದಾರ ಮತ್ತು ದೊಡ್ಡ ಗ್ರಾಹಕ ಸರಕುಗಳ ಸರಬರಾಜುದಾರ ರಾಷ್ಟ್ರವಾಗಿದೆ..
ಒಲಿ ಈ ವಾರದಲ್ಲಿ ಬಾರತಕ್ಕೆ ಭೇಟಿ ನೀಡಲಿದ್ದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಕೋವಿಂದ್ ಹಾಗು ಇತರೆ ಉನ್ನತ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.
ಕಳೆದ ಮಾರ್ಚ್ ನಲ್ಲಿ ನಡೆದ ಸಭೆಯಲ್ಲಿ ಪ್ರತಿ ನೇಪಾಳಿ ಪ್ರಜೆ ಭಾರತೀಯ ಬ್ಯಾಂಕ್ ನೋಟುಗಳ ಮೌಲ್ಯದ 4,500 ರೂಪಾಯಿಯನ್ನು ವಿನಿಮಯ ಮಾಡಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ಮೌಖಿಕ ಒಪ್ಪಿಗೆ ನಿಡಿತ್ತೆಂದು ನೇಪಾಳದ ಕೇಂದ್ರ ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.
ಆದರೆ ಈ ಸಂಬಂಧ ಇದುವರೆಗೂ ನಮಗೆ ಔಪಚಾರಿಕವಾಗಿ ಏನನ್ನೂ ತಿಳಿಸಿಲ್ಲ ಎಂದು ನೇಪಾಳದ ಕೇಂದ್ರ ಬ್ಯಾಂಕ್ (ಎನ್ ಆರ್ ಬಿ)  ಉಪ ಗವರ್ನರ್ ಚಿಂತಾಮಣಿ ಶಿವಕೋಟಿ ರಾಯಿಟರ್ಸ್ ಗೆ ಹೇಳಿದ್ದಾರೆ.
ಅಪನಗದೀಕರಣದ ವೇಳೆ ಸರ್ಕಾರ ಹೊರಡಿಸಿದ ಆದೇಶದಲ್ಲಿ ನೇಪಾಳ ಅಥವಾ ಯಾವುದೇ ದೇಶದಲ್ಲಿರಬಹುದಾದ ಭಾರತೀಯ ಬ್ಯಾಂಕ್ ನ ಹಳೆ ನೊಟುಗಳ ವಿನಿಮಯ  ಸಂಬಂಧ ಯಾವ ನಿಯಮಾವಳಿಗಳಿರಲಿಲ್ಲ. ಹೀಗಾಗಿ  ಕೇಂದ್ರ ಬ್ಯಾಂಕ್ ಗೆ ಈ ಸಂಬಂಧ ಯಾವ ಕ್ರಮ ಅನುಸರಿಸುವುದೂ ಸಾಧ್ಯವಾಗಲಿಲ್ಲ ಎಂದು ಆರ್ ಬಿಐ ದೃಷ್ಟಿಕೋನಗಳ ಬಗೆಗೆ ಅಧ್ಯಯನ ನಡೆಸಿರುವ ಹಿರಿಯ ಅಧಿಕಾರಿಗಳೊಬ್ಬರು ಹೇಳಿದ್ದಾರೆ.
ಚುನಾಯಿತ ಸರ್ಕಾರ ಮಾತ್ರವೇ ಈ ಸಂಬಂಧ ನಿರ್ಧಾರ ತೆಗೆದುಕೊಲ್ಳುವುದು ಸಾಧ್ಯ ಎಂದು ಅವರುಹೇಳಿದ್ದಾರೆ.
ಅನಾಣ್ಯೀಕರಣ ಸಮಯದಲ್ಲಿ ಭಾರತೀಯರಿಗೆ ತಮ್ಮಲ್ಲಿನ ಹಳೆ ನೋಟಿನ ವಿನಿಮಯಕ್ಕಾಗಿ ಸುಮಾರು ಎರಡು ತಿಂಗಳುಗಳ ಕಾಲ ಸಮಯಾವಕಾಶ ನಿಡಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com