ಬಾಕು: ಭಯೋತ್ಪಾದನೆ ಜಾಗತಿಕ ಶಾಂತಿಗೆ ಮತ್ತು ಭದ್ರತೆಗೆ ಅತಿದೊಡ್ಡ ಬೆದರಿಕೆಯಾಗಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಹೇಳಿದ್ದಾರೆ.
ಅಲಿಪ್ತ ಚಳುವಳಿ(ಎನ್ಎಎಂ)ಯ 18ನೇ ಮಧ್ಯಮ ಅವಧಿಯ ಸಚಿವರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸುಷ್ಮಾ ಸ್ವರಾಜ್ ಅವರು, ಭಯೋತ್ಪಾದನೆ ಜಾಗತಿಕ ಶಾಂತಿಗೆ ಅತಿದೊಡ್ಡ ಬೆದರಿಕೆಯಾಗಿದೆ. ಇದು
ನಮ್ಮ ನಾಗರಿಕರನ್ನು ಕೊಲ್ಲುತ್ತದೆ ಮತ್ತು ನಾವು ಅಭಿವೃದ್ಧಿಯ ಗುರಿ ತಲುಪುವ ಸಾಮರ್ಥ್ಯವನ್ನು ಕಡಿಮೆಗೊಳಿಸುತ್ತದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ನಮ್ಮ ಮಾತುಗಳು ನಮ್ಮ ಕ್ರಮಗಳಿಗೆ ಹೊಂದಾಣಿಕೆಯಾಗದಿರುವುದು ದುರದೃಷ್ಟಕರ. ದ್ವಿಮುಖ ನೀತಿ ಹೊಂದಿರುವ ಅಂತರಾಷ್ಟ್ರೀಯ ಕಾನೂನಿನಿಂದಾಗಿ ಭಯೋತ್ಪಾದನೆ ವಿರುದ್ಧದ ಹೋರಾಟ ಸಫಲವಾಗುತ್ತಿದೆ ಎಂದರು.
ಇದೇ ವೇಳೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣ ತರುವ ಅಗತ್ಯ ಇದೆ ಎಂದ ಸುಷ್ಮಾ, ಯಾವುದೇ ಪ್ರಯತ್ನ ಇಲ್ಲದೆ ಸುಧಾರಣೆ ಸಾಧ್ಯವಿಲ್ಲ ಎಂದಿದ್ದಾರೆ.