ಭಾರತ ಬಳಸುತ್ತಿರುವ ರಷ್ಯಾದ ಯುದ್ಧ ಟ್ಯಾಂಕರ್ ಮೇಲೆ ಪಾಕಿಸ್ತಾನ ಕಣ್ಣು

ರಷ್ಯಾದ ಯುದ್ದ ವಿಮಾನ, ಟ್ಯಾಂಕರ್ ಹಾಗೂ ರಕ್ಷಣಾ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಶಸ್ತ್ರಾಸ್ತ್ರಗಳ ಮೇಲೆ ಪಾಕಿಸ್ತಾನ ಕಣ್ಣಿಟ್ಟಿದ್ದು, ಅವುಗಳನ್ನು ಕೊಂಡೊಕೊಳ್ಳಲು ಉತ್ಸುಕವಾಗಿದೆ.
ಯುದ್ದ ಟ್ಯಾಂಕರ್ ಚಿತ್ರ
ಯುದ್ದ ಟ್ಯಾಂಕರ್ ಚಿತ್ರ

ಇಸ್ಲಾಮಾಬಾದ್ : ರಷ್ಯಾದ  ಯುದ್ದ ವಿಮಾನ, ಟ್ಯಾಂಕರ್ ಹಾಗೂ ಅತ್ಯಾಧುನಿಕ  ರಕ್ಷಣಾ ಸಾಧನ ಕಲಕರಣೆಗಳ  ಮೇಲೆ ಪಾಕಿಸ್ತಾನ ಕಣ್ಣಿಟ್ಟಿದ್ದು, ಅವುಗಳನ್ನು ಕೊಂಡೊಕೊಳ್ಳಲು ಉತ್ಸುಕವಾಗಿದೆ.

ಮಾಸ್ಕೊದಿಂದ  ಯುದ್ದೋಪಕರಣಗಳನ್ನು ಕೊಂಡೊಕೊಳ್ಳಲು ಪಾಕಿಸ್ತಾನ ಆಸಕ್ತಿ ಹೊಂದಿದೆ ಎಂದು  ರಕ್ಷಣಾ ಸಚಿವೆ ಕುರಾಮ್ ಡಾಸ್ಟ್ ಗಿರ್ ಖಾನ್  ರಷ್ಯಾದ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸ್ಪಷ್ಪಪಡಿಸಿದ್ದಾರೆ.

 ರಷ್ಯಾದಲ್ಲಿನ ವಿಭಿನ್ನ ಪ್ರಕಾರದ ವಾಯು ರಕ್ಷಣಾ ವ್ಯವಸ್ಥೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದು,  ಮಾತುಕತೆ ಬಳಿಕ ಘೋಷಣೆ ಮಾಡಲಾಗುವುದು ಎಂದು ಖಾನ್ ಹೇಳಿದ್ದಾರೆ. ಅಲ್ಲದೇ, ಟಿ-90 ಟ್ಯಾಂಕರ್ ಕೊಂಡುಕೊಳ್ಳಲು ಸಹ ಪಾಕಿಸ್ತಾನ ಉತ್ತುಕವಾಗಿರುವುದಾಗಿ ಅವರು ತಿಳಿಸಿದ್ದಾರೆ.

ಭಾರತ ಕೂಡಾ ಈ ಟಿ-90 ಟ್ಯಾಂಕ್ ಬಳಸುತ್ತಿದೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಕೊಳ್ಳಲು ಭಾರತ ಈಗಾಗಲೇ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಎಸ್ -400  ಟ್ರಯಂಪ್,  ಕ್ಷಿಪಣಿ ನಿರೋಧಕ ರಕ್ಷಣಾ ಸಾಧನ ಕೊಳ್ಳಳು ಪ್ರಧಾನಿ ನರೇಂದ್ರಮೋದಿ  2016 ಅಕ್ಟೋಬರ್ ನಲ್ಲಿ  ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದು ವಿಶ್ವದಲ್ಲಿಯೇ ಅತಿ ಉದ್ದದ  ರಕ್ಷಣಾ ಕ್ಷಿಪಣಿಯಾಗಿದ್ದು, 400 ಕಿಲೋ ಮೀಟರ್ ವರೆಗೂ ದೂರ ಸಾಗಬಹುದಾಗಿದೆ.





ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com