

ಇಸ್ಲಾಮಬಾದ್ : ಪಾಕಿಸ್ತಾನ ನಿರ್ಮಿತ ಬಾಬುರ್ ಕ್ರೂಸ್ ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿ ಇಂದು ನಡೆದಿದೆ.
ಭಾರತದ ಹಲವು ನಗರಗಳಿಗೆ ವ್ಯಾಪಿಸಬಲ್ಲಾ ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕ ವಲ್ಲದ ಸುಮಾರು 700 ಕಿಲೋಮೀಟರ್ ಶ್ರೇಣಿಯ ಶಸಾಸ್ತ್ರಗಳನ್ನು ಈ ಕ್ಷಿಪಣಿ ಮೂಲಕ ವಿತರಣೆ ಮಾಡಬಹುದಾಗಿದೆ.
ಬಾಬುರ್ ಸಿಸ್ಟಮ್ -1 ಬಿ ಭೂ ಪ್ರದೇಶ ತಬ್ಬಿಕೊಳ್ಳುವ ಕಡಿಮೆ ಹಾರಾಟದ ಕ್ಷಿಪಣಿಯಾಗಿದೆ. ವಿವಿಧ ಪ್ರಕಾರದ ಶಸಾಸ್ತ್ರಗಳನ್ನು ಇದರ ಮೂಲಕ ಕೊಂಡೊಯ್ಯಬಹುದಾಗಿದ್ದು, ಸಮುದ್ರ ಮತ್ತು ಭೂಮಿಯಿಂದ ಹೆಚ್ಚಿನ ನಿಖರತೆಯಿಂದ ಗುರಿಮುಟ್ಟಬಲ್ಲಾದು ಎಂದು ಪಾಕಿಸ್ತಾನ ಸೇನೆ ತಿಳಿಸಿದೆ.
ಭೂ ಪ್ರದೇಶ ಬಾಹ್ಯರೇಖೆ ಹೊಂದಾಣಿಕೆ (ಟಿಇಆರ್ ಕಾಮ್ ) ಮತ್ತು ಎಲ್ಲಾ ವೇಳೆಯಲ್ಲಿನ ಡಿಜಿಟಲ್ ಚಿತ್ರದ ಹೊಂದಾಣಿಕೆ ಮತ್ತು ಪ್ರದೇಶ ಸಂಬಂಧ ತಂತ್ರಜ್ಞಾನದಿಂದ (ಡಿಎಸ್ ಮ್ಯಾಕ್ )ಜಿಪಿಎಸ್ ಸಂಚರಣೆ ಇಲ್ಲದೆಯೂ ವಿವಿಧ ಪ್ರಕಾರದಲ್ಲಿ ಗುರಿ ತಲೆ ತಲುಪಬಹುದಾಗಿದೆ . ಬಹು ಉಪಯೋಗದ ನಿಟ್ಟಿನಲ್ಲಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಸೇನೆ ಹೇಳಿದೆ.
ಈ ಕ್ಷಿಪಣಿ ಉಡಾವಣೆ ಸಂದರ್ಭದಲ್ಲಿ ಹಲವು ಮಂದಿ ವಿಜ್ಞಾನಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ ವಿಜ್ಞಾನಿಗಳು ಹಾಗೂ ಎಂಜಿನಿಯರ್ ಗಳ ಕಾರ್ಯವನ್ನು ಪಾಕಿಸ್ತಾನ ಅಧ್ಯಕ್ಷ ಎಂ, ಹುಸೈನ್ ಹಾಗೂ ಪ್ರಧಾನಿ ಶಾಹಿದ್ ಕಾಕ್ವನ್ ಅಬ್ಬಾಸಿ ಶ್ಲಾಘಿಸಿದ್ದಾರೆ.