ಬ್ರಿಟನ್ ಸಂಸತ್ ಮೇಲ್ಮನೆಯಲ್ಲಿ ಪಾಕಿಸ್ತಾನ ಮೂಲದ ಜನಪ್ರತಿನಿಧಿ ಲಾರ್ಡ್ ಅಹ್ಮದ್ ಎಂಬುವವರು ಈ ವಿಚಾರ ಪ್ರಸ್ತಾಪ ಮಾಡಿದ್ದು, ಪ್ರಕರಣ ಸಂಬಂಧ ಬ್ರಿಟನ್ ಸರ್ಕಾರ ಮಧ್ಯೆ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ. ಆದರೆ ಲಾರ್ಡ್ ಅಹ್ಮದ್ ಅವರ ಈ ಬೇಡಿಕೆಗೆ ಬ್ರಿಟನ್ ಸಂಸತ್ ಸಾರಸಗಟಾಗಿ ತಿರಸ್ಕರಿಸಿದ್ದು, ಭಾರತ ಪ್ರಬಲ ಪ್ರಜಾಸತ್ತಾತ್ಮಕ ಚೌಕಟ್ಟನ್ನು ಹೊಂದಿದ್ದು, ಮಾನವಹಕ್ಕುಗಳನ್ನು ಖಾತರಿಪಡಿಸಲಿದೆ ಎಂದು ಹೇಳಿದೆ.