ಲಂಡನ್ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ
ವಿದೇಶ
ಹೆಣ್ಣುಮಕ್ಕಳಿಗೆ ಮಾತ್ರವಲ್ಲ, ಮನೆಗೆ ಬರುವ ಗಂಡುಮಕ್ಕಳ ಏಕೆ ಪ್ರಶ್ನೆ ಮಾಡುವುದಿಲ್ಲ: ಪ್ರಧಾನಿ ಮೋದಿ
ಹೆಣ್ಣು ಮಕ್ಕಳ ಮಾತ್ರವಲ್ಲ, ಮನೆಗೆ ಬರುವ ಗಂಡುಮಕ್ಕಳನ್ನು ಏಕೆ ಪೋಷಕರು ಪ್ರಶ್ನೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಲಂಡನ್: ಹೆಣ್ಣು ಮಕ್ಕಳ ಮಾತ್ರವಲ್ಲ, ಮನೆಗೆ ಬರುವ ಗಂಡುಮಕ್ಕಳನ್ನು ಏಕೆ ಪೋಷಕರು ಪ್ರಶ್ನೆ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.
ಅನಿವಾಸಿ ಭಾರತೀಯರೊಂದಿಗೆ ಲಂಡನ್ ನಲ್ಲಿ ನಡೆದ 'ಭಾರತ್ ಸಬ್ ಕೇ ಸಾಥ್' ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಭಾರತದಲ್ಲಿ ಮಹಿಳೆಯರ ಸುರಕ್ಷತೆ ಕುರಿತಂತೆ ಮಾತನಾಡಿದರು. ಈ ವೇಳೆ ಪ್ರೇಕ್ಷಕರೊಬ್ಬರು ಕೇಳಿದ ಮಹಿಳಾ ಸುರಕ್ಷತೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಅತ್ಯಾಚಾರದಂತಹ ಪ್ರಕರಣಗಳನ್ನು ಯಾವಾಗಲೂ ಖಂಡಿಸಬೇಕು. ನಿಜಕ್ಕೂ ಇದು ಕಳವಳಕಾರಿ ವಿಚಾರವಾಗಿದ್ದು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಅತ್ಯಾಚಾರ ಪ್ರಕರಣಗಳು ನಡೆಯಿತು, ಇತರರ ಅಧಿಕಾರದ ಅವಧಿಯಲ್ಲಿ ಎಷ್ಟು ಪ್ರಕರಣ ನಡೆಯಿತು ಎಂಬುದರ ಕುರಿತು ಚರ್ಚೆ ಅನಗತ್ಯ.
ನಮ್ಮ ಚರ್ಚೆ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕೇ ಹೊರತು, ಒಬ್ಬರ ಮೇಲೊಬ್ಬರು ಆರೋಪ ಹೊರಿಸುವುದಲ್ಲ. ನನ್ನ ಸ್ವತಂತ್ರ್ಯ ದಿನಾಚರಣೆಯ ಕೆಂಪುಕೋಟೆ ಭಾಷಣದ ವೇಳೆ ನಾನು ಈ ಬಗ್ಗೆ ಮಾತನಾಡಿದ್ದೆ. ಹೆಣ್ಣು ಮಕ್ಕಳ ಮಾತ್ರವಲ್ಲ, ಮನೆಗೆ ಬರುವ ಗಂಡುಮಕ್ಕಳನ್ನು ಏಕೆ ಪೋಷಕರು ಪ್ರಶ್ನೆ ಮಾಡುವುದಿಲ್ಲ. ಮನೆಗೆ ವಾಪಸ್ ಆಗುವ ಗಂಡುಮಕ್ಕಳು ಎಲ್ಲಿಗೆ ಹೋಗಿದ್ದರು ಎಂಬುದನ್ನು ಪೋಷಕರು ಪ್ರಶ್ನಿಸಬೇಕು ಎಂದು ಹೇಳಿದ್ದೆ ಎಂದು ಮೋದಿ ಹೇಳಿದರು.
ಇದೇ ವೇಳೆ ಕೇಂದ್ರ ಸರ್ಕಾರದ ಬಯಲು ಶೌಚಮುಕ್ತ ಕಾರ್ಯಕ್ರಮದ ಕುರಿತು ಮಾತನಾಡಿದ ಪ್ರಧಾನಿ ಮೋದಿ ಈಗ ದೇಶದ ಸುಮಾರು 3 ಲಕ್ಷ ಮನೆಗಳು ಬಯಲು ಶೌಚ ಮುಕ್ತವಾಗಿವೆ ಎಂದು ಮಾಹಿತಿ ನೀಡಿದರು.


