2ನೇ ದಿನದ ಮಾತುಕತೆ ಆರಂಭ: ವುಹಾನ್'ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜೊತೆ ಪ್ರಧಾನಿ ಮೋದಿ 'ಚಾಯ್ ಪೇ ಚರ್ಚಾ'
ವಿದೇಶ
2ನೇ ದಿನದ ಮಾತುಕತೆ ಆರಂಭ: ವುಹಾನ್'ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜೊತೆ ಪ್ರಧಾನಿ ಮೋದಿ 'ಚಾಯ್ ಪೇ ಚರ್ಚಾ'
ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಜೊತೆಗೆ 2 ದಿನಗಳ ಅನೌಪಚಾರಿಕ ಏಕಾಂತ ಶೃಂಗ ಸಭೆಗಾಗಿ ಚೀನಾಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಸಿ ಜಿನ್ ಪಿಂಗ್ ಅವರೊಂದಿಗೆ...
ವುಹಾನ್; ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಜೊತೆಗೆ 2 ದಿನಗಳ ಅನೌಪಚಾರಿಕ ಏಕಾಂತ ಶೃಂಗ ಸಭೆಗಾಗಿ ಚೀನಾಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಸಿ ಜಿನ್ ಪಿಂಗ್ ಅವರೊದಿಗೆ ಶನಿವಾರ ಚಾಯ್ ಪೇ ಚರ್ಚಾ ನಡೆಸಿದರು.
ಪ್ರವಾಸದ ಎರಡನೇ ದಿನವಾದ ಇಂದು ಪ್ರಧಾನಿ ಮೋದಿಯವರು ಚೀನಾ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಉಭಯ ದೇಶಗಳ ನಡುವೆ ಉತ್ತಮ ಬಾಂಧವ್ಯ ಕಲ್ಪಿಸುವ ನಿಟ್ಟಿನಲ್ಲಿ ಕೆಲ ಮಾಡುವುದಾಗಿ ಉಭಯ ನಾಯಕರು ಭರವಸೆ ನೀಡಿದರು.
ಇದೇ ವೇಳೆ ಪ್ರಧಾನಿ ಮೋದಿಯವರು ಚೀನಾ ರಾಷ್ಟ್ರದ ಪ್ರಸಿದ್ಧ ವಾದ್ಯ ಕೇಳಿ ಆನಂದಿಸಿದರು.
ಇದು ಇಬ್ಬರು ನಾಯಕರು ಏಕಾಂತ ಮಾತುಕತೆ ನಡೆಸುವ ಅನೌಪಚಾರಿಕ ಶೃಂಗವಾಗಿದ್ದು, ಯಾವುದೇ ಒಪ್ಪಂದಗಳಿಗೆ ಸಹಿ ಹಾಕುವುದಿಲ್ಲ.
ಇಂದು ಉಭಯ ನಾಯಕರು ವುಹಾನ್ ಸರೋವರದ ಪಕ್ಕ ವಾಕ್ ಮಾಡಲಿದ್ದು, ನಂತರ ದೋಣಿ ವಿಹಾರ ನಡೆಸಲಿದ್ದಾರೆ. ಮಧ್ಯಾಹ್ನ ಊಟದ ನಂತರ ಭೇಟಿ ಅಂತ್ಯಗೊಳ್ಳಲಿದೆ.
ಇತ್ತೀಚೆಗೆ ಡೋಕ್ಲಾಂ ವಿಚಾರದಲ್ಲಿ 73 ದಿನಗಳ ಕಾಲ ಉಭಯ ದೇಶಗಳ ನಡುವೆ ನಡೆದ ಘರ್ಷಣೆಯ ನಂತರ ಪರಸ್ಪರ ಸಂಬಂಧ ಹದಗೆಟ್ಟಿದ್ದು, ಅದನ್ನು ಸರಿಪಡಿಸಿಕೊಳ್ಳಲು ಈ ಶೃಂಗವು ಭೂಮಿಕೆಯಾಗಲಿದೆ ಎಂದು ಹೇಳಲಾಗಿದೆ.
2014ರಲ್ಲಿ ಮೋದಿ ಪ್ರಧಾನಮಂತ್ರಿಯಾದ ಕೆಲವೇ ತಿಂಗಳಲ್ಲಿ ಇದೇ ಮಾದರಿಯ ಅನೌಪಚಾರಿಕ ಶೃಂಗವನ್ನು ಗುಜರಾತ್'ನ ಅಹಮದಾಬಾದ್ ನಲ್ಲಿ ಕ್ಸಿ ಜಿನ್ ಪಿಂಗ್ ಅವರಿಗಾಗಿ ಏರ್ಪಡಿಸಿದ್ದರು. ಮೋದಿ ಪ್ರಧಾನಿಯಾದ ನಂತರ ಇದು ಚೀನಾಕ್ಕೆ ನೀಡುತ್ತಿರುವ 4ನೇ ಭೇಟಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ