ಲಂಡನ್: 60 ವರ್ಷಗಳ ಹಿಂದೆ ಬಿಹಾರದ ನಳಂದ ವಸ್ತುಸಂಗ್ರಹಾಲಯದಿಂದ ಕಳ್ಳತನವಾಗಿದ್ದ ಪುರಾತನ ಕಂಚಿನ ಬುದ್ಧನ ಪ್ರತಿಮೆನ್ನು ಲಂಡನ್ ಪೊಲೀಸರು ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತಕ್ಕೆ ಮರಳಿಸಿದ್ದಾರೆ.
12ನೇ ಶತಮಾನದ ಈ ಪ್ರತಿಮೆಯನ್ನು ಕಳೆದ ಮಾರ್ಚ್ ನಲ್ಲಿ ಲಂಡನ್ ನ ವ್ಯಾಪಾರ ಮೇಳದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಈ ವೇಳೆ ಲಂಡನ್ ಮೆಟ್ರೋಪಾಲಿಟನ್ ಪೊಲೀಸರು ಈ ಪ್ರತಿಮೆಯನ್ನು ವಶಕ್ಕೆ ಪಡೆದಿದ್ದರು.
ಮಾರಾಟಗಾರರಿಗೆ ಈ ಪ್ರತಿಮೆಯ ಇತಿಹಾಸ ತಿಳಿದಿರಲಿಲ್ಲ. ಅಷ್ಟೇ ಅಲ್ಲದೇ ಇದನ್ನು ಭಾರತಕ್ಕೆ ಹಿಂದಿರುಗಿಸಲು ಒಪ್ಪಿಕೊಂಡರು. ಹೀಗಾಗಿ ಇಂದು ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಲಂಡನ್ ನಲ್ಲಿರುವ ಭಾರತದ ಹೈ ಕಮೀಷನರ್ ವೈ.ಕೆ.ಸಿಂಹಾ ಅವರಿಗೆ ಲಂಡನ್ ಪೊಲೀಸರು ಹಸ್ತಾಂತರಿಸಿದ್ದಾರೆ.
1961ರಲ್ಲಿ ನಳಂದ ವಸ್ತುಸಂಗ್ರಹಾಲಯದಿಂದ ಕಳ್ಳತನವಾಗಿದ್ದ ಒಟ್ಟು 14 ಕಂಚಿನ ಬುದ್ಧನ ಪ್ರತಿಮೆಗಳ ಪೈಕಿ ಇದು ಸಹ ಒಂದಾಗಿದೆ.