ಇಮ್ರಾನ್ ಖಾನ್ ಪ್ರಧಾನಿಯಾದ ಬೆನ್ನಲ್ಲೇ ಸಿಪಿಇಸಿ ಮೇಲೆ ಕರಿನೆರಳು!?

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷೆಯ ಚೀನಾ-ಪಾಕ್ ಎಕಾನಾಮಿಕ್ ಕಾರಿಡಾರ್ ಯೋಜನೆಯ ಮೇಲೆ ಕರಿನೆರಳು ಬಿದ್ದಿದೆ.
ಇಮ್ರಾನ್ ಖಾನ್
ಇಮ್ರಾನ್ ಖಾನ್
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೆ ಚೀನಾ-ಪಾಕಿಸ್ತಾನದ ಮಹತ್ವಾಕಾಂಕ್ಷೆಯ ಚೀನಾ-ಪಾಕ್ ಎಕಾನಾಮಿಕ್ ಕಾರಿಡಾರ್ ಯೋಜನೆಯ ಮೇಲೆ ಕರಿನೆರಳು ಬಿದ್ದಿದೆ. 
ಸಿಪಿಇಸಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ್ ತೆಹ್ರೀಕ್-ಎ-ಇನ್ ಸಾಫ್ ಪಕ್ಷದ ಹಿರಿಯ ನಾಯಕ್ರೊಬ್ಬರು ಈ ಬಗ್ಗೆ ಮಾತನಾಡಿದ್ದು,  ಹೊಸ ಸರ್ಕಾರ ಸಿಪಿಇಸಿಯಲ್ಲಿ ಪಾಕಿಸ್ತಾನದ ಹಿತಾಸಕ್ತಿಗಳಿಗೆ ಅನುಗುಣವಾಗಿ ಇರದ ಯೋಜನೆಗಳನ್ನು ಗುರುತಿಸಲಿದೆ ಎಂದು ಹೇಳಿದ್ದಾರೆ. 
ಹೊಸ ಸರ್ಕಾರ ಸಿಪಿಇಸಿ ಯೋಜನೆಗಳನ್ನು ಪುನಃಪರಿಶೀಲನೆ ನಡೆಸಲಿದೆ ಎಂದು ಪಿಟಿಐ ನ ನಾಯಕ ಸಯೀದ್ ಶಿಬ್ಲಿ ಫರಾಝ್ ಹೇಳಿದ್ದಾರೆ. 
ಪಾಕಿಸ್ತಾನದ ಸೆನೆಟ್ ನಲ್ಲಿ ಯೋಜನೆ, ಅಭಿವೃದ್ಧಿ, ಸುಧಾರಣೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಯ ಸದಸ್ಯರೂ ಆಗಿರುವ ಹಿನ್ನೆಲೆಯಲ್ಲಿ ಫರಾಝ್ 
ಅವರ ಹೇಳಿಕೆ ಮಹತ್ವ ಪಡೆದುಕೊಂಡಿದೆ. 
ಸಿಪಿಇಸಿ ಯೋಜನೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿಲ್ಲ, ಪಾಕಿಸ್ತಾನದ ಹಿತಾಸಕ್ತಿಗೆ ವಿರುದ್ಧವಾದ ಅಂಶಗಳಿವೆ ಎಂದು ಪಿಟಿಐ ಪಕ್ಷ ಈ ಹಿಂದಿನ ಸರ್ಕಾರ ನಡೆಸುತ್ತಿದ್ದ ಪಿಎಂಎಲ್-ಎನ್ ವಿರುದ್ಧ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಈಗ ಇಮ್ರಾನ್ ಖಾನ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಸಿಪಿಇಸಿಗೆ ಸಂಬಂಧಿಸಿದಂತೆ ಚೀನಾ ಮೇಲೆ ಪಾಕ್ ಸರ್ಕಾರದ ಒತ್ತಡ ಹೆಚ್ಚಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com