ನೂತನ ವಿದೇಶಾಂಗ ಸಚಿವ ಶಾಹ್ ಮಹಮ್ಮದ್ ಖುರೇಷಿ ಅವರು, ಭಾರತದ ಪ್ರಧಾನಮಂತ್ರಿಗಳು ಪಾಕಿಸ್ತಾನದ ಜೊತೆಗೆ ಮಾತುಕತೆ ನಡೆಸುವ ಕುರಿತು ಪ್ರಸ್ತಾಪ ಮಾಡಿರುವುದಾಗಿ ಯಾವ ಹೇಳಿಕೆಗಳನ್ನೂ ನೀಡಿಲ್ಲ. ಆದರೆ, ಇಮ್ರಾನ್ ಖಾನ್ ಅವರಿಗೆ ಮೋದಿ ಪತ್ರ ಬರೆದಿದ್ದರು ಎಂದಷ್ಟೇ ಹೇಳಿದ್ದರು ಎಂದು ತಿಳಿಸಿದ್ದಾರೆ.
ಭಾರತಕ್ಕೆ ಆ.18 ರಂದು ಭೇಟಿ ನೀಡಿದ್ದ ಪಾಕಿಸ್ತಾದನ ಮಾಜಿ ಕಾನೂನು ಸಚಿವ ಅಲಿ ಜಾಫರ್ ಅವರು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಗೊಂದಿಗೆ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ನಡುವೆ ಸಕಾರಾತ್ಮಕ ಹಾಗೂ ರಚನಾತ್ಮಕ ವಾತಾವರಣ ಸೃಷ್ಟಿಸುವ ಕುರಿತಂತೆ ಮಾತುಕತೆ ನಡೆಸಿದ್ದರು.
ಉಭಯ ರಾಷ್ಟ್ರಗಳ ನಡುವೆ ಇರುವ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಭಾರತದೊಂದಿಗೆ ಪರಸ್ಪರ ಪ್ರಯೋಜಕ ಹಾಗೂ ನಿರಂತರ ಮಾತುಕತೆ ನಡೆಸಲು ಪಾಕಿಸ್ತಾನ ಎದುರು ನೋಡುತ್ತಿದೆ. ಈ ನಡುವೆ ವಿವಾದಗಳು ಸೃಷ್ಟಿಯಾಗಿ, ಸಕಾರಾತ್ಮಕ ವಾತಾವರಣಗಳು ಹದಗೆಟ್ಟರೆ ಅವುಗಳಿಗೆ ಮಾಧ್ಯಮಗಳೇ ನೇರಹೊಣೆಯಾಗಿರುತ್ತವೆ ಎಂದಿದ್ದಾರೆ.