ಉಯ್ಘರ್ ಮುಸ್ಲಿಮರನ್ನು ಮುಕ್ತಗೊಳಿಸಿ: ಯುಎನ್ ಸಮಿತಿ ಸಲಹೆ ತಿರಸ್ಕರಿಸಿದ ಚೀನಾ

ಝಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ ಅಪಾರ ಸಂಖ್ಯೆಯ ಉಯ್ಘರ್ ಮುಸ್ಲಿಮರನ್ನು ಬಂಧಿಸಲಾಗಿದೆ ಎಂಬ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಆರೋಪಗಳನ್ನು ಚೀನಾ ವಜಾಗೊಳಿಸಿದ್ದು, ಮಾಹಿತಿ ಪರಿಶೀಲಿಸದೆ ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀಜಿಂಗ್  : ಝಿನ್ಜಿಯಾಂಗ್ ಪ್ರಾಂತ್ಯದಲ್ಲಿರುವ  ಅಪಾರ ಸಂಖ್ಯೆಯ ಉಯ್ಘರ್ ಮುಸ್ಲಿಮರನ್ನು ಬಂಧಿಸಲಾಗಿದೆ ಎಂಬ  ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಆರೋಪಗಳನ್ನು ಚೀನಾ ವಜಾಗೊಳಿಸಿದ್ದು,  ಮಾಹಿತಿ ಪರಿಶೀಲಿಸದೆ ಆರೋಪ ಮಾಡಲಾಗಿದೆ ಎಂದು ಹೇಳಿಕೆ ನೀಡಿದೆ.

ಝಿನ್ಜಿಯಾಂಗ್ ಪ್ರಾಂತ್ಯದಲ್ಲಿ  ಹೆಚ್ಚಿನ ಸಂಖ್ಯೆಯ ಉಯ್ಘರ್  ಹಾಗೂ  ಇನ್ನಿತರ ಅಲ್ಪಸಂಖ್ಯಾತ ಮುಸ್ಲಿಂರನ್ನು ಅಕ್ರಮವಾಗಿ ಬಂಧನದಲ್ಲಿ ಇಟ್ಟಿರುವ ಬಗ್ಗೆ ವರದಿಗಳು ಬಂದಿದ್ದು, ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಜಿನಿವಾದಲ್ಲಿನ ವಿಶ್ವ ಸಂಸ್ಥೆ  ಮಾನವ ಹಕ್ಕುಗಳ ಸಮಿತಿ ನಿನ್ನೆ ಹೇಳಿಕೆ ನೀಡಿತ್ತು.

 10 ಸಾವಿರದಿಂದ ಒಂದು ಬಿಲಿಯನ್ ವರೆಗೂ ಹೀಗೆ ಬಂಧನದಲ್ಲಿಡಲಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಈ ಹೇಳಿಕೆ ಕುರಿತಂತೆ  ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರೆ  ಹುವಾ ಚುನೈಯಿಂಗ್, ಝಿನ್ಜಿಯಾಂಗ್ ಪ್ರಾಂತ್ಯದಲ್ಲಿನ ಪರಿಸ್ಥಿತಿ ಪರಿಶೀಲನೆ ವೇಳೆಯಲ್ಲಿ ಕೆಲ ತಪ್ಪು  ಹೇಳಿಕೆಗಳನ್ನು ನೀಡಲಾಗಿದೆ.  ಯಾವುದೇ ಮಾಹಿತಿಯನ್ನು ಪರಿಶೀಲಿಸದೆ ಪರಿಶೀಲನೆ ಮಾಡಲಾಗಿದೆ.  ಇಲ್ಲಿನ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಝಿನ್ಜಿಯಾಂಗ್ ಪ್ರಾಂತ್ಯದಲ್ಲಿ ಆರ್ಥಿಕ ಅಭಿವೃದ್ದಿ ಉತ್ತೇಜಿಸುವುದು ಚೀನಾದ ಪ್ರಮುಖ ಗುರಿಯಾಗಿದೆ ಎಂದು  ಅವರು  ತಿಳಿಸಿದ್ದಾರೆ.

ಈ ಮಧ್ಯೆ  ಭಯೋತ್ಪಾದನೆ ಹಾಗೂ ಪ್ರತ್ಯೇಕತಾ ಶಕ್ತಿಗಳನ್ನು ನಿಯಂತ್ರಿಸಿ ಜನ ಹಾಗೂ ಆಸ್ತಿಪಾಸ್ತಿ ರಕ್ಷಣೆಗೆ ಚೀನಾ ಆದ್ಯತೆ ನೀಡುತ್ತದೆ ಎಂದು ಹುವಾ ಚುನೈಯಿಂಗ್ ತಿಳಿಸಿದ್ದಾರೆ.

ಇತರ ಕಡೆಗಳಿಂದ ಬಂದಿರುವ  ಬಂದಿರುವ ಮುಸ್ಲಿಂರು ಝಿನ್ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದು,  ಇಲ್ಲಿನ ಹಿಂಸಾಚಾರಕ್ಕೆ ಪ್ರತ್ಯೇಕ ಪೂರ್ವ  ತರ್ಕಿಸ್ತಾನ್ ಇಸ್ಲಾಂಮಿಕ್ ಮೂವ್ ಮೆಂಟ್   ಹಾಗೂ ಅಲ್ ಖೈದಾ ಸಂಘಟನೆ  ಕಾರಣವೆಂದು ಚೀನಾ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com