ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ತೀವಿ: ಇಸ್ರೇಲ್ ಪ್ರಧಾನಿ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕ ಬ್ಯಾನ್!

ಇಸ್ರೇಲ್ ಸೇನಾ ದಳ (ಐಡಿಎಫ್)ದ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಭಯೋತ್ಪಾದಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪುತ್ರನ ಫೇಸ್ ಬುಕ್
ಇಸ್ರೇಲ್ ಪ್ರಧಾನಿ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕ ಬ್ಯಾನ್!
ಇಸ್ರೇಲ್ ಪ್ರಧಾನಿ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕ ಬ್ಯಾನ್!
ಇಸ್ರೇಲ್ ಸೇನಾ ದಳ (ಐಡಿಎಫ್)ದ ಇಬ್ಬರು ಯೋಧರನ್ನು ಹತ್ಯೆ ಮಾಡಿದ್ದಕ್ಕೆ ಭಯೋತ್ಪಾದಕರ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ್ದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಪುತ್ರನ ಫೇಸ್ ಬುಕ್ ಖಾತೆಯನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಲಾಗಿದೆ. 
ತಮ್ಮ ಫೇಸ್ ಬುಕ್ ಖಾತೆಯನ್ನು ತಾತ್ಕಾಲಿಕವಾಗಿ ಬ್ಯಾನ್ ಮಾಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೈರ್ ನೇತನ್ಯಾಹು, ಫೇಸ್ ಬುಕ್ ನನ್ನ ಧ್ವನಿ ಅಡಗಿಸುವುದಕ್ಕೆ ಯತ್ನಿಸುತ್ತಿದೆ. ಎಲ್ಲಿ ನನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದಕ್ಕೆ ಅವಕಾಶ ನೀಡಬೇಕೋ ಅಲ್ಲೇ ನನ್ನ ಧ್ವನಿಯನ್ನುಅಡಗಿಸಲು ಯತ್ನಿಸಲಾಗಿದೆ. ಫೇಸ್ ಬುಕ್ ಪೊಲೀಸರು ನನ್ನನ್ನು ಕಂಡುಹಿಡಿದಿದ್ದಾರೆ. ಅಭಿನಂದನೆಗಳು ಎಂದು ಯೈರ್ ನೆತನ್ಯಾಹು ಹೇಳಿದ್ದಾರೆ. 
ಪ್ರಧಾನಿಯ ಪುತ್ರನ ಫೇಸ್ ಬುಕ್ ಖಾತೆ ತಾತ್ಕಾಲಿಕವಾಗಿ ಬ್ಯಾನ್ ಮಾಡಿರುವುದರ ಬಗ್ಗೆ ಜೆರುಸಲೇಮ್ ಪೋಸ್ಟ್ ವರದಿ ಪ್ರಕಟಿಸಿದ್ದು,  "ಫೇಸ್ ಬುಕ್ ನಲ್ಲಿ ಹಮಾಸ್, ಹೆಜ್ಬೊಲ್ಲಾಹ್ ಹಾಗೂ ಇರಾನಿಯನ್ ಸರ್ಕಾರದ ಸದಸ್ಯರ ಅಧಿಕೃತ ಪೇಜ್ ಗಳಿವೆ. ಜ್ಯೂ ಗಳ ಹತ್ಯೆ ಹಾಗೂ ನಿರ್ನಾಮ ಮಾಡುವುದಕ್ಕೆ ಕರೆ ನೀಡುವ ಅಸಂಖ್ಯ ಫೇಸ್ ಬುಕ್ ಪೇಜ್ ಗಳು ಇನ್ನೂ ಅಸ್ತಿತ್ವದಲ್ಲಿವೆ. ನನ್ನ ಹಾಗೂ ನನ್ನ ಕುಟುಂಬ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿರುವ ಸಾವಿರಾರು ಪೋಸ್ಟ್ ಗಳನ್ನು ಫೇಸ್ ಬುಕ್ ನಿಂದ ತೆಗೆಯಲಾಗುವುದಿಲ್ಲ, ಅವೆಲ್ಲವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರುತ್ತವೆ ಎಂದು ಯೈರ್ ನೇತನ್ಯಾಹು ಹೇಳಿರುವುದನ್ನು ಜೆರುಸಲೇಮ್ ಪತ್ರಿಕೆ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com