ಟ್ರಂಪ್ ಸರ್ಕಾರದ ಪ್ರಮುಖ ವಿಕೆಟ್ ಪತನ, ಅಮೆರಿಕ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ರಾಜಿನಾಮೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದ್ದು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಅಮೆರಿಕ  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರದ ಮತ್ತೊಂದು ಪ್ರಮುಖ ವಿಕೆಟ್ ಪತನವಾಗಿದ್ದು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಜೇಮ್ಸ್ ಮ್ಯಾಟಿಸ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ರಾಜಿನಾಮೆ ಪತ್ರವನ್ನು ಈಗಾಗಲೇ ಶ್ವೇತಭವನಕ್ಕೆ ತಲುಪಿಸಿದ್ದಾರೆ. ಇಲಾಖೆಯ ಆಂತರಿಕ ಒಳಿತಿನ ದೃಷ್ಟಿಕೋನದಿಂದ ನಾನು ನನ್ನ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದೇನೆ. ಇದೇ ಫೆಬ್ರವರಿಯಲ್ಲಿ ನನ್ನ ಆಡಳಿತಾವಧಿ ಕೊನೆಯಾಗಲಿದೆಯಾದರೂ ನನ್ನ ಸ್ಥಾನದಿಂದ ಕೆಳಗಿಳಿಯಲು ಇದು ಸೂಕ್ತ ಸಮಯವಾಗಿದೆ. ಅಲ್ಲದೆ ನೂತನ ಕಾರ್ಯದರ್ಶಿಗಳಿಗೆ ಸ್ಥಾನಕ್ಕೆ ಹೊಂದಿಕೊಳ್ಳಲು ಸಾಕಷ್ಟು ಸಮಯಾವಕಾಶ ದೊರೆಯುವುದರಿಂದ ನಾನು ಈ ನಿರ್ಧಾರ ಮಾಡಿದ್ದೇನೆ ಎಂದು ಮ್ಯಾಟಿಸ್ ಹೇಳಿದ್ದಾರೆ.
ರಾಜಿನಾಮೆಗೆ ಕಾರಣವಾಯ್ತು ಟ್ರಂಪ್ ಸರ್ಕಾರದ ನಿರ್ಧಾರ
ಇನ್ನು ಜೇಮ್ಸ್ ಮ್ಯಾಟಿಸ್ ರಾಜಿನಾಮೆಗೆ ಅದ್ಯಕ್ಷ ಟ್ರಂಪ್ ರೊಂದಿಗೆ ಇದ್ದ ಭಿನ್ನಾಭಿಪ್ರಾಯಗಳೇ ಕಾರಣ ಎಂದು ಹೇಳಲಾಗುತ್ತಿದೆ. ಯುದ್ಧ ಪೀಡಿತ ಸಿರಿಯಾದಿಂದ ಅಮೆರಿಕ ರಕ್ಷಣಾ ಪಡೆಗಳ ವಾಪಸಾತಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆದೇಶ ನೀಡಿದ್ದರು. ಇದು ಮ್ಯಾಟಿಸ್ ಭಿನ್ನಾಭಿಪ್ರಾಯಕ್ಕೆ ಕಾರಣ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಅಮೆರಿಕ ಸರ್ಕಾರವಾಗಲಿ ಅಥವಾ ಅಧ್ಯಕ್ಷ ಟ್ರಂಪ್ ಆಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com