ಭೀಕರ ವಿಡಿಯೋ: ಸಂಗೀತ ಕಾರ್ಯಕ್ರಮ ವೇಳೆ ಅಪ್ಪಳಿಸಿದ ಸುನಾಮಿ, ನೂರಾರು ಮಂದಿ ಕಣ್ಮರೆ!

ಜ್ವಾಲಾಮುಖಿ ಸ್ಫೋಟದಿಂದ ಸಂಭವಿಸಿದ ಭೀಕರ ಸುನಾಮಿಯಿಂದಾಗಿ ಇಂಡೋನೇಷ್ಯಾ ಅಕ್ಷರಶಃ ತತ್ತರಿಸಿದ್ದು 222ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟದಿಂದ ಸಂಭವಿಸಿದ ಭೀಕರ ಸುನಾಮಿಯಿಂದಾಗಿ ಇಂಡೋನೇಷ್ಯಾ ಅಕ್ಷರಶಃ ತತ್ತರಿಸಿದ್ದು 222ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. 
ತಂಜಾಂಗ್ ಲೆಸುಂಗ್ ಸಮುದ್ರ ತೀರದ ರೆಸಾರ್ಟ್ ಬಳಿ ಸಂಗೀತ ಕಾರ್ಯಕ್ರಮವೊಂದು ನಡೆಯುತ್ತಿತ್ತು. ವೇದಿಕೆ ಮೇಲೆ ಸೆವೆಂಟೀನ್ ಬ್ಯಾಂಡ್ ನ ಗಾಯಕರ ಗುಂಪು ಹಾಡುತ್ತಿದ್ದಾಗ ದಿಢೀರ್ ಅಂತ ಸುನಾಮಿ ಅಪ್ಪಳಿಸಿದ್ದು ಅಲ್ಲಿದ್ದವರಲ್ಲಿ ಕೆಲವರು ಕೊಚ್ಚಿಕೊಂಡು ಹೋಗಿದ್ದಾರೆ.
ಕಾರ್ಯಕ್ರಮದಲ್ಲಿದ್ದ ವ್ಯಕ್ತಿಯೋರ್ವ ತಮ್ಮ ಮೊಬೈಲ್ ನಲ್ಲಿ ಸಂಗೀತ ಕಾರ್ಯಕ್ರಮವನ್ನು ವಿಡಿಯೋ ಮಾಡುತ್ತಿದ್ದು ಈ ವಿಡಿಯೋದಲ್ಲಿ ಭೀಕರ ದೃಶ್ಯಗಳು ಸೆರೆಯಾಗಿದೆ.
ಸೆವೆಂಟೀನ್ ಬ್ಯಾಂಡ್ ನ ಗಾಯಕ ರೆಫಿಯನ್ ಫಜಾರ್ಸಿಯಾ ಇನ್ಸ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು ತಮ್ಮ ತಂಡದ ಇಬ್ಬರು ವ್ಯಕ್ತಿಗಳನ್ನು ಕಳೆದುಕೊಂಡೆವು ಎಂದು ಅಳುತ್ತಿರುವ ವಿಡಿಯೊವೊಂದು ಮನಕಲಕುವಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com