ಈಜಿಪ್ಟ್ : ದಾಳಿ ವೇಳೆಯಲ್ಲಿ ಶಂಕಿತ 40 ಉಗ್ರರ ಹತ್ಯೆ

ಗೈಜಾ ಪಿರಾಮಿಡ್ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಈಜಿಪ್ಟ್ ದೇಶದ ಭದ್ರತಾ ಅಧಿಕಾರಿಗಳು ದಾಳಿ ನಡೆಸಿ ಶಂಕಿತ ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಕೈರೋ: ಗೈಜಾ ಪಿರಾಮಿಡ್ ಬಳಿ ಸಂಭವಿಸಿದ್ದ ಬಾಂಬ್ ಸ್ಪೋಟಕ್ಕೆ ಸಂಬಂಧಿಸಿದಂತೆ ಈಜಿಪ್ಟ್  ದೇಶದ ಭದ್ರತಾ ಅಧಿಕಾರಿಗಳು ದಾಳಿ ನಡೆಸಿ ಶಂಕಿತ ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಭದ್ರತಾ ಪಡೆಗಳು ಇಂದು  ಡಾನ್ ಪ್ರದೇಶದ ಬಳಿ ದಾಳಿ ನಡೆಸಿರುವುದಾಗಿ  ಮೂಲಗಳನ್ನು ಉಲ್ಲೇಖಿಸಿ  ಖಾಸಗಿ ಸುದ್ದಿವಾಹಿನಿಯೊಂದ ವರದಿ ಮಾಡಿದೆ.
ರಜಾ ದಿನದಿಂದು ಅಮಾನುಷ ರೀತಿಯಲ್ಲಿ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದರು ಎಂಬುದನ್ನು ಮೂವರು ಶಂಕಿತರು  ಬಾಯ್ಬಿಟ್ಟಿದ್ದಾರೆ ಎಂದು ಈಜಿಪ್ಟ್  ಒಳಾಡಳಿತ ಸಚಿವಾಲಯ ಹೇಳಿಕೆ ನೀಡಿದೆ ಎಂದು ಆನ್ ಲೈನ್  ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.
ಶಂಕಿತ ಭಯೋತ್ಪಾದಕರಿಂದ ಅಪಾರ ಪ್ರಮಾಣದ ಸ್ಪೋಟಕ ಸಲಕರಣೆಗಳು,  ಶಸಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com