ಕರ್ತಾರ್ ಪುರ ಕಾರಿಡಾರ್: ಸಿಖ್ ಯಾತ್ರಾರ್ಥಿಗಳಿಗೆ ವೀಸಾ-ಮುಕ್ತ ಯಾತ್ರೆಗೆ ಪಾಕಿಸ್ತಾನದ ಪ್ರಸ್ತಾವನೆ

ಕರ್ತಾರ್ ಪುರ ಕಾರಿಡಾರ್ ಮೂಲಕ ಸಿಖ್ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಯಾತ್ರೆಗೆ ಪಾಕಿಸ್ತಾನದ ಸರ್ಕಾರ ಭಾರತಕ್ಕೆ ಪ್ರಸ್ತಾವನೆ ಕಳಿಸಿದೆ.
ಕರ್ತಾರ್ ಪುರ ಕಾರಿಡಾರ್: ಸಿಖ್ ಯಾತ್ರಾರ್ಥಿಗಳಿಗೆ ವೀಸಾ-ಮುಕ್ತ ಯಾತ್ರೆಗೆ ಪಾಕಿಸ್ತಾನದ ಪ್ರಸ್ತಾವನೆ
ಕರ್ತಾರ್ ಪುರ ಕಾರಿಡಾರ್: ಸಿಖ್ ಯಾತ್ರಾರ್ಥಿಗಳಿಗೆ ವೀಸಾ-ಮುಕ್ತ ಯಾತ್ರೆಗೆ ಪಾಕಿಸ್ತಾನದ ಪ್ರಸ್ತಾವನೆ
ನವದೆಹಲಿ: ಕರ್ತಾರ್ ಪುರ ಕಾರಿಡಾರ್ ಮೂಲಕ ಸಿಖ್ ಯಾತ್ರಾರ್ಥಿಗಳಿಗೆ ವೀಸಾ ಮುಕ್ತ ಯಾತ್ರೆಗೆ ಪಾಕಿಸ್ತಾನದ ಸರ್ಕಾರ ಭಾರತಕ್ಕೆ ಪ್ರಸ್ತಾವನೆ ಕಳಿಸಿದೆ. 
ಎಕ್ಸ್ ಪ್ರೆಸ್ ನ್ಯೂಸ್ ಟಿವಿಯ ವರದಿ ಪಾಕಿಸ್ತಾನದ ರಾಯಭಾರಿ ಕಚೇರಿ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿದ್ದು, ಭಾರತೀಯ ಸಿಖ್ ಸಮುದಾಯದ ಯಾತ್ರಾರ್ಥಿಗಳಿಗೆ ಪಾಕಿಸ್ತಾನದ ಕರ್ತಾರ್ ಪುರದ ಶ್ರದ್ಧಾ ಕೇಂದ್ರಕ್ಕೆ ಉಚಿತ ಭೇಟಿ ನೀಡಲು ಪಾಕಿಸ್ತಾನ ಶಿಫಾರಸ್ಸುಗಳನ್ನು ಭಾರತಕ್ಕೆ ಕಳಿಸಿಕೊಟ್ಟಿದ್ದು, ವೀಸಾ-ಮುಕ್ತ ಯಾತ್ರೆಯ ಪ್ರಸ್ತವನೆಯನ್ನು ಭಾರತದ ಮುಂದಿಟ್ಟಿದೆ. 
ಸುಮಾರು 59 ಪುಟಗಳಷ್ಟು ಪ್ರಸ್ತಾವನೆಯನ್ನು ಪಾಕ್ ಕಳಿಸಿಕೊಟ್ಟಿದ್ದು ಉಭಯ ದೇಶಗಳ ಗಡಿ ಪ್ರದೇಶಗಳಲ್ಲಿ ಭದ್ರತಾ ತಪಾಸಣೆಗಾಗಿ ಚೆಕ್ ಪೋಸ್ಟ್ ಗಳನ್ನು ನಿರ್ಮಿಸುವುದು ಹಾಗೂ ಭಾರತದ ಪಾಸ್ ಪೋರ್ಟ್, ಭದ್ರತಾ ಕ್ಲಿಯರೆನ್ಸ್ ಹೊಂದಿರುವ  ಯಾತ್ರಾರ್ಥಿಗಳಿಗೆ ವಿಶೇಷ ಪರವಾನಗಿ ನೀಡಲಾಗುವುದು ಎಂದು ತಿಳಿಸಿದೆ. 
ಪ್ರಸ್ತಾವನೆಯ ಪ್ರಕಾರ ಭಾರತ ಸರ್ಕಾರ ಇಲ್ಲಿಂದ ತೆರಳುವ ಯಾತ್ರಾರ್ಥಿಗಳ ಬಗೆಗಿನ ಮಾಹಿತಿಯನ್ನು ಪಾಕಿಸ್ತಾನಕ್ಕೆ 3 ದಿನಗಳ ಮುಂಚಿತವಾಗಿ ಕಳಿಸಬೇಕಾಗಿದೆ. ದಿನವೊಂದಕ್ಕೆ, ಭದ್ರತಾ ಕ್ಲಿಯರೆನ್ಸ್ ಹೊಂದಿರುವ  500 ಯಾತ್ರಾರ್ಥಿಗಳಿಗೆ ಪ್ರವೇಶ ಕಲ್ಪಿಸುವುದಾಗಿ ಪಾಕ್ ಪ್ರಸ್ತಾವನೆಯಲ್ಲಿ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com