ಸ್ನೇಹದ ಕಾಣಿಕೆ: ಇಸ್ರೇಲ್ ಪ್ರಧಾನಿಯಿಂದ ಮೋದಿಗೆ ಸಮುದ್ರ ನೀರು ಶುದ್ಧೀಕರಿಸುವ ಜೀಪ್ ಗಿಫ್ಟ್!

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಜನವರಿ 14ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ವೇಳೆ ಸಮುದ್ರ ನೀರು ಶುದ್ಧೀಕರಿಸುವ ವಾಹನವನ್ನು...
ಬೆಂಜಮಿನ್ ನೇತನ್ಯಾಹು-ನರೇಂದ್ರ ಮೋದಿ
ಬೆಂಜಮಿನ್ ನೇತನ್ಯಾಹು-ನರೇಂದ್ರ ಮೋದಿ
ಜೆರುಸಲೇ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಜನವರಿ 14ರಂದು ಭಾರತಕ್ಕೆ ಭೇಟಿ ನೀಡುತ್ತಿದ್ದು ಈ ವೇಳೆ ಸಮುದ್ರ ನೀರು ಶುದ್ಧೀಕರಿಸುವ ವಾಹನವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. 
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಗೆ ಪ್ರಯಾಣಿಸಿದ್ದಾಗ ಬೆಂಜಮಿನ್ ನೇತನ್ಯಾಹು ಅವರ ಜತೆ ಇದೇ ಜೀಪ್ ನಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ಪ್ರಯಾಣಿಸಿದ್ದರು. ನೇತನ್ಯಾಹು 4 ದಿನಗಳ ಭಾರತ ಭೇಟಿಗೆ ಆಗಮಿಸಲಿದ್ದು ಈಗಾಗಲೇ ಈ ಜೀಪ್ ಭಾರತಕ್ಕೆ ಹೊರಟಿದೆ. 
ಗಾಲ್ ಮೊಬೈಲ್ ಜೀಪ್ ನ ಮಾರುಕಟ್ಟೆ ಬೆಲೆ ಸುಮಾರು 70 ಲಕ್ಷ ರುಪಾಯಿ. ಈ ಜೀಪ್ ಒಂದು ಸ್ವತಂತ್ರ, ಸಮಗ್ರ ನೀರು ಶುದ್ಧೀಕರಣ ವಾಹನವಾಗಿದೆ. ಇದು ಉತ್ತಮ ಗುಣಮಟ್ಟದ ನೀರನ್ನು ಶುದ್ಧೀಕರಿಸಬಲ್ಲದು. 
ನೈಸರ್ಗಿಕ ವಿಪತ್ತಿನ ವೇಳೆ ಇದು ಅತ್ಯಂತ ಉಪಯುಕ್ತ. ಪ್ರವಾಹ ಸಂಭವಿಸಿದಾಗ ಕುಡಿಯುವ ನೀರಿನ ಕೊರತೆ ಎದುರಾದಾಗ ಈ ಜೀಪ್ ನಿಂದ ನೀರು ಒದಗಿಸಬಹುದಾಗಿದೆ. ಇದು ದಿನಕ್ಕೆ 20 ಸಾವಿರ ಲೀಟರ್ ಸಮುದ್ರ ನೀರನ್ನು ಶುದ್ಧೀಕರಿಸಬಲ್ಲದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com