ಭಾರತ ಎಂದರೆ ವ್ಯಾಪಾರ, ವ್ಯವಹಾರ: ಜಾಗತಿಕ ಸಿಇಒ'ಗಳಿಗೆ ಪ್ರಧಾನಿ ಮೋದಿ

ಭಾರತ ಎಂದರೆ ವ್ಯವಹಾರ. ಜಾಗತಿಕ ವ್ಯವಹಾರಗಳಿಗೆ ಒಂದು ಉತ್ತೇಜಕ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಸಿಇಒಗಳಿಗೆ ತಿಳಿಸಿದ್ದಾರೆ...
ಜಾಗತಿಕ ಸಿಇಒಗಳ ಜತೆಗಿನ ಸಭೆಯಲ್ಲಿ ನರೇಂದ್ರ ಮೋದಿ
ಜಾಗತಿಕ ಸಿಇಒಗಳ ಜತೆಗಿನ ಸಭೆಯಲ್ಲಿ ನರೇಂದ್ರ ಮೋದಿ
ದಾವೋಸ್: ಭಾರತ ಎಂದರೆ ವ್ಯವಹಾರ. ಜಾಗತಿಕ ವ್ಯವಹಾರಗಳಿಗೆ ಒಂದು ಉತ್ತೇಜಕ ಅವಕಾಶವನ್ನು ಒದಗಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಸಿಇಒಗಳಿಗೆ ತಿಳಿಸಿದ್ದಾರೆ. 
ಸ್ವಿಡ್ಜರ್ ಲ್ಯಾಂಡಿನಲ್ಲಿ ನ ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸಿರುವ ಪ್ರಧಾನಿ ಪ್ರಧಾನಿ ಮೋದಿ ಅವರು ಕೆಲ ಜಾಗತಿಕ ಸಿಇಒಗಳೊಂದಿಗೆ ಚರ್ಚಿಸಿದರು. ಈ ವೇಳೆ ಮೇಕ್ ಇನ್ ಇಂಡಿಯಾ ಬಗ್ಗೆ ಪ್ರಸ್ತಾಪಿಸಿದ ಅವರು ಭಾರತದಲ್ಲಿ ಹೂಡಿಕೆ ಮಾಡಲು ಇದು ಒಂದು ಸುವರ್ಣವಕಾಶ ಎಂದರು. 
ಭಾರತ ಎಂದರೆ ವ್ಯವಹಾರ ಎಂಬ ಅಡಿಬರಹದಲ್ಲಿ ಜಾಗತಿಕ ಕಂಪನಿಗಳ 40 ಸಿಇಒಗಳು ಈ ಚರ್ಚೆಯಲ್ಲಿ ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಸರ್ಕಾರದ ಉನ್ನತ ಅಧಿಕಾರಿಗಳಾದ ವಿಜಯ್ ಗೋಯಾಲ್, ಜೈಶಂಕರ್ ಮತ್ತು ರಮೇಶ್ ಅಭಿಶೇಕ್ ಇದ್ದರು. 
ಸಭೆ ಬಳಿಕ ವಿದೇಶಾಂಗ ಸಚಿವಾಲಯದ ವಕ್ತಾರ ರಮೇಶ್ ಕುಮಾರ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ದಾವೋಸ್ ನಲ್ಲಿ ಭಾರತದ ಅಭಿವೃದ್ಧಿಯ ಕಥೆ ಮತ್ತು ಜಾಗತಿಕ ವ್ಯಾಪಾರಕ್ಕಾಗಿ ಅತ್ಯಾಕರ್ಷಕ ಅವಕಾಶಗಳನ್ನು ಪ್ರಸ್ತುತಪಡಿಸಿದರು ಎಂದು ಟ್ವೀಟಿಸಿದ್ದಾರೆ. 
ವಿಶ್ವ ಆರ್ಥಿಕ ಶೃಂಗದಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ದಾವೋಸ್ ಪ್ರಯಾಣ ಬೆಳೆಸಿದ್ದರು. 20 ವರ್ಷಗಳ ಬಳಿಕ ಭಾರತ ಪ್ರಧಾನಿಯೊಬ್ಬರು ದಾವೋಸ್ ಶೃಂಗದಲ್ಲಿ ಭಾಗವಹಿಸುತ್ತಿರುವುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com