ಭಾರತ ಮೂಲದ 'ಬ್ರಿಟನ್ ಜಿಹಾದಿ ಸಿದ್' ಜಾಗತಿಕ ಉಗ್ರ ಎಂದು ಘೋಷಿಸಿದ ಅಮೆರಿಕ

ವಿವಿಧ ಉಗ್ರ ದಾಳಿಗಳಲ್ಲಿ ಭಾಗಿಯಾದ ಭಾರತ ಮೂಲದ ಬ್ರಿಟನ್ ನಿವಾಸಿ ಸಿದ್ಧಾರ್ಥ ಧರ್ ನನ್ನು ಅಮೆರಿಕ ಸರ್ಕಾರ ಜಾಗಕಿ ಉಗ್ರ ಎಂದು ಘೋಷಣೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ವಿವಿಧ ಉಗ್ರ ದಾಳಿಗಳಲ್ಲಿ ಭಾಗಿಯಾದ ಭಾರತ ಮೂಲದ ಬ್ರಿಟನ್ ನಿವಾಸಿ ಸಿದ್ಧಾರ್ಥ ಧರ್ ನನ್ನು ಅಮೆರಿಕ ಸರ್ಕಾರ ಜಾಗಕಿ ಉಗ್ರ ಎಂದು ಘೋಷಣೆ ಮಾಡಿದೆ.
ಮಂಗಳವಾರ ನಡೆದ ಪೆಂಟಗಾನ್ ಸಭೆಯಲ್ಲಿ ಬ್ರಿಟನ್ ಮೂಲದ ಸಿದ್ಧಾರ್ಥ ಧರ್ ಮತ್ತು ಮೊರಾಕ್ಕೋ ಮೂಲದ ಇಸಿಸ್ ಉಗ್ರನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡಲಾಗಿದೆ. ಸಿದ್ಧಾರ್ಥ್ ಧರ್ ಮೂಲತಃ ಹಿಂದೂವಾಗಿದ್ದು,  ಬಳಿಕ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿದ್ದ. ಈತನ ಪೋಷಕರು ಭಾರತ ಮೂಲದವರಾಗಿದ್ದು, ಈತ ಬ್ರಿಟನ್ ನಲ್ಲಿ ನೆಲೆಸಿದ್ದ. 2014ರಲ್ಲಿ ಸಿದ್ಧಾರ್ಥ ಧರ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಸಿರಿಯಾಗೆ ತೆರಳಿ ಇಸ್ಲಾಮಿಕ್ ಉಗ್ರ  ಸಂಘಟನೆಗೆ ಸೇರ್ಪಡೆಯಾಗಿದ್ದ ಎಂದು ಅಮೆರಿಕದ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಈ ಹಿಂದೆ ಅಂದರೆ 2016ರಲ್ಲಿ ಅಮೆರಿಕ ಸೇನೆಯಿಂದ ರಕ್ಷಿಸಲ್ಪಟ್ಟಿದ್ದ ನಿಹಾದ್ ಬರಾಕತ್ ಎಂಬ ಲೈಂಗಿಕ ಸಂತ್ರಸ್ಥೆ, ತನ್ನನ್ನು ಇಸ್ಲಾಮಿಕ್ ಉಗ್ರರು ಅಪಹರಣ ಮಾಡಿ ಲೈಂಗಿಕ ಗುಲಾಮಳಾಗಿರಿಸಿಕೊಂಡಿದ್ದರು. ಆ ತಂಡದಲ್ಲಿ  ಸಿದ್ಧಾರ್ಥಧರ್ ಕೂಡ ಇದ್ದ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಳು. ಸಿದ್ಧಾರ್ಥ ಧರ್ ಮತ್ತು ಆತನ ತಂಡ ನನ್ನನ್ನು ಮೊಸಲ್ ನಗರಕ್ಕೆ ಅಹಪರಣ ಮಾಡಿದ್ದರು ಎಂದು ಹೇಳಿದ್ದಳು.
ಇಸಿಸ್ ಗೆ ಸೇರ್ಪಡೆಯಾದ ಕೆಲವೇ ತಿಂಗಳುಗಳಲ್ಲೇ ಸಿದ್ಧಾರ್ಥ ಧರ್ ಸಂಘಟನೆಯ ಪ್ರಮುಖ ಕಮಾಂಡರ್ ಆಗಿ ಗುರುತಿಸಿಕೊಂಡಿದ್ದು, ಈತನನ್ನು 'ಹೊಸ ಜಿಹಾದಿ ಜಾನ್' ಎಂದೇ ಕರೆಯಲಾಗುತ್ತಿತ್ತು. ಸಿದ್ಧಾರ್ಥ ಧರ್ ನನ್ನು ಈ  ಹಿಂದೆ ಇಸಿಸ್ ಉಗ್ರ ಸಂಘಟನೆಯ ನೇತೃತ್ವ ವಹಿಸಿದ್ದ ಮಹಮದ್ ಎಮ್ವಾಜಿಯ ಉತ್ತರಾಧಿರಿ ಎಂದು ಹೇಳಲಾಗುತ್ತಿದೆ ಎಂದು ಅಮೆರಿಕ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com