ಈ ಬಗ್ಗೆ ಅಮೆರಿಕದ ಖ್ಯಾತ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದ್ದು, ಟ್ರಂಪ್-ಕಿಮ್ ಸಿಂಗಾಪುರ ಶೃಂಗಸಭೆ ಬಳಿಕವೂ ಉತ್ತರ ಕೊರಿಯಾ ತನ್ನ ಅಣ್ವಸ್ತ್ರ ಯೋಜನೆಗಳನ್ನು ಯಾವುದೇ ಎಗ್ಗಿಲ್ಲದೇ ಮುಂದುವರೆಸಿಕೊಂಡು ಬಂದಿದೆ. ಕನಿಷ್ಛ ಪಕ್ಷ ಯೋಜನೆಗಳನ್ನು ನಿಧಾನಗತಿಯಾಗಿಸುತ್ತದೆ ಎಂಬ ವಿಶ್ವದ ಕಲ್ಪನೆಗೂ ಉತ್ತರ ಕೊರಿಯಾ ಸೆಡ್ಡು ಹೊಡೆದಿದ್ದು, ನಿಧಾನಗೊಳಿಸುವ ಬದಲಿಗೆ ಹಾಲಿ ನಡೆಯುತ್ತಿರುವ ಅಣ್ವಸ್ತ್ರ ಯೋಜನೆಗಳನ್ನು ತ್ವರಿತಗತಿಯಲ್ಲಿ ಸಾಗುವಂತೆ ಮಾಡಿದೆ.