ವಿಜಯ್ ಮಲ್ಯ ಆಸ್ತಿ ಪ್ರಕರಣ: ಜಾರಿ ಆದೇಶ ನೀಡಿದ ಬ್ರಿಟನ್ ಕೋರ್ಟ್

ವಿಜಯ್ ಮಲ್ಯಾ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಕೋರ್ಟ್ ಭಾರತದ 13 ಬ್ಯಾಂಕ್ ಗಳ ಪರವಾಗಿ ಜಾರಿ ಆದೇಶ ಹೊರಡಿಸಿದೆ.
ವಿಜಯ್ ಮಲ್ಯ
ವಿಜಯ್ ಮಲ್ಯ
ಲಂಡನ್: ವಿಜಯ್ ಮಲ್ಯಾ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟನ್ ಕೋರ್ಟ್ ಭಾರತದ 13 ಬ್ಯಾಂಕ್ ಗಳ ಪರವಾಗಿ ಜಾರಿ ಆದೇಶ ಹೊರಡಿಸಿದೆ. 
9,000 ಕೋಟಿ ರೂಪಾಯಿ ಬ್ಯಾಂಕ್ ಗಳಿಗೆ ಬಾಕಿ ಹಣ ನೀಡಬೇಕಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಬ್ರಿಟನ್ ಕೋರ್ಟ್ ನಲ್ಲಿ ಕಾನೂನು ಸಮರ ನಡೆಸುತ್ತಿದ್ದವು. ಈಗ ಬ್ಯಾಂಕ್ ಗಳ ಪರವಾಗಿ ಬ್ರಿಟನ್ 
ಕೋರ್ಟ್ ಜಾರಿ ಆದೇಶ ನೀಡಿದ್ದು, ವಿಜಯ್ ಮಲ್ಯ ಲಂಡನ್ ನಲ್ಲಿರುವ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯವಹರಿಸಲು  ಸಹಕಾರಿಯಾಗಿದೆ. 
ಕೋರ್ಟ್ ಜಾರಿ ಆದೇಶ ನೀಡಿದೆಯಾದರೂ, ಸುಮಾರು 1.145 ಬಿಲಿಯನ್ ಪೌಂಡ್ ಗಳಷ್ಟು ಹಣವನ್ನು ಮರಳೀಪಡೆಯುವುದಕ್ಕೆ ಭಾರತೀಯ ಬ್ಯಾಂಕ್ ಗಳಿಗೆ ನೇರವಾಗಿ ಅವಕಾಶ ಇರುವುದಿಲ್ಲ. ಬ್ರಿಟನ್ ನ ಹೈಕೋರ್ಟ್ ಜಾರಿ ಅಧಿಕಾರಿ ಹಾಗೂ ಆತನ ವ್ಯಾಪ್ತಿಗೆ ಬರುವ ಅಧಿಕಾರಿಗಳು ಲಂಡನ್ ಬಳಿ ಇರುವ ವಿಜಯ್ ಮಲ್ಯ ಅವರ ಲೇಡಿವಾಕ್, ಕ್ವೀನ್ ಹೂ ಲೇನ್, ಟಿವಿನ್, ವೆಲ್ವಿನ್ ಮತ್ತು ಬ್ರಾಂಬಲ್ ಲಾಡ್ಜ್, ಕ್ವೀನ್ ಹೂ ಲೇನ್, ಟೆವಿನ್ ನ ಆಸ್ತಿಗಳಿಗೆ ಸಂಬಂಧಿಸಿದಂತೆ ವ್ಯವಹರಿಸಬಹುದಾಗಿದ್ದು, ವಶಕ್ಕೆ ಪಡೆಯಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com