ಥಾಯ್ಲೆಂಡ್ ಗುಹೆಯಲ್ಲಿ ಮಕ್ಕಳ ರಕ್ಷಣೆಗೆ ಹರಸಾಹಸ; ಮೈ ಜುಮ್ಮೆನ್ನಿಸುತ್ತಿದೆ ಕಾರ್ಯಾಚರಣೆ ವಿಡಿಯೋ

ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಕಾರ್ಯಾಚರಣೆಯ ಕೆಲ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ವೈರಲ್ ಆಗುತ್ತಿದೆ.
ರಕ್ಷಣಾ ಕಾರ್ಯಾಚರಣೆ ವಿಡಿಯೋ
ರಕ್ಷಣಾ ಕಾರ್ಯಾಚರಣೆ ವಿಡಿಯೋ
ಬ್ಯಾಂಕಾಕ್: ಥಾಯ್ಲೆಂಡ್ ಗುಹೆಯಲ್ಲಿ ಸಿಲುಕಿರುವ ಮಕ್ಕಳ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರೆದಿದ್ದು, ಕಾರ್ಯಾಚರಣೆಯ ಕೆಲ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪರ ವೈರಲ್ ಆಗುತ್ತಿದೆ.
ಅತ್ಯಂತ ಕಠಿಣವಾದ ಗುಹೆಯಲ್ಲಿ ಮಳೆಯ ಪರಿಣಾಮ ನೀರು ತುಂಬಿಕೊಂಡಿದ್ದು, ಮಳೆಯ ನೀರಿನಡಿಯಲ್ಲೇ ರಕ್ಷಣಾ ಸಿಬ್ಬಂದಿಗಳು ತಮ್ಮ ಜೀವಂದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಪೈಕಿ ಓರ್ವ ಸಿಬ್ಬಂದಿ ತನ್ನ ಆಕ್ಸಿಜನ್ ಸಿಲಿಂಡರ್ ಅನ್ನು ಕೈಯಲ್ಲಿ ಹಿಡಿದು ನೀರಿನಡಿಯಲ್ಲೇ ಅತ್ಯಂತ ಕಡಿದಾದ  ಮತ್ತು ಕಿರಿದಾದ ಸಣ್ಣ ದಾರಿಯಲ್ಲಿ ನುಗ್ಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋದಲ್ಲಿರುವಂತೆ ಒಮ್ಮೆ ಏನಾದರೂ ಆ ರಕ್ಷಣಾ ಸಿಬ್ಬಂದಿ ಆ ಕಡಿದಾದ ಗುಹೆಯಲ್ಲಿ ಸಿಲುಕಿಕೊಂಡರೆ ಆತನ ಸಾವು ಕಟ್ಟಿಟ್ಟ ಬುತ್ತಿ. ಆದರೂ ಆತ ಹರಸಾಹಸ ಪಟ್ಟು ಗುಹೆಯಲ್ಲಿರುವ ಮಕ್ಕಳ ರಕ್ಷಣೆಗಾಗಿ ಸಾಗುತ್ತಿರುವುದು ಪ್ರಶಂಸೆಗೆ ಕಾರಣವಾಗಿದೆ. 
ಇನ್ನು ಸೋಮವಾರದ ರಕ್ಷಣಾ ಕಾರ್ಯಾಚರಣೆಯ ಅಂತ್ಯದ ವೇಳೆ ಒಟ್ಟು 16 ಮಂದಿ ಬಾಲಕರ ಪೈಕಿ 8 ಮಂದಿ ಬಾಲಕರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಹೆಯೊಳಗೆ ಸಿಲುಕಿ ಸಂಕಷ್ಟದಲ್ಲಿರುವ ಬಾಲಕರ ರಕ್ಷಣೆಗೆ 'ಮಕ್ಕಳ ಗಾತ್ರದ ಸಬ್‌ಮೆರಿನ್‌'ಗಳನ್ನು ಅಮೆರಿಕ ರವಾನಿಸಿದೆ. ಲಾಸ್ ಏಂಜಲಿಸ್‌ ನಲ್ಲಿರುವ ಸ್ಪೇಸ್ ಎಕ್ಸ್ ಮತ್ತು ಟೆಲ್ಸಾ ಸಂಸ್ಥೆಯ ಸಿಇಒ ಎಲಾನ್ ಮಸ್ಕ್ ತಮ್ಮ ಬಳಿ ಇರುವ ಮಕ್ಕಳ ಗಾತ್ರದ ಸಬ್‌ಮೆರಿನ್‌ಗಳನ್ನು ಥಾಯ್ಲೆಂಡ್‌ಗೆ ರವಾನಿಸುವುದಾಗಿ ಹೇಳಿದ್ದು ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ತರುತ್ತೇವೆ ಎಂದು ರಕ್ಷಣಾ ಪಡೆಯ ಯೋಧರು ಹೇಳಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಈಗಾಗಲೇ ನೇವಿ ಸೀಲ್ ನ ನಿವೃತ್ತ ಯೋಧರು ಮಕ್ಕಳ ರಕ್ಷಣಾ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com