ಅಮೆರಿಕ-ಚೀನಾ ನಡುವಿನ ಟ್ರೇಡ್ ವಾರ್ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದು ಚೀನಾದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಅಮೆರಿಕ ಚೀನಾ ಸಂಸ್ಥೆಗಳ ಮೇಲೆ ಹೆಚ್ಚು ಆಮದು ಸುಂಕ ವಿಧಿಸಿದಷ್ಟೂ ಹೆಚ್ಚು ಸಂಸ್ಥೆಗಳು ದಿವಾಳಿತನ ಎದುರಿಸುವ ಭಯದಲ್ಲಿರುತ್ತವೆ ಎಂದು ಚೀನಾ ಆತಂಕ ವ್ಯಕ್ತಪಡಿಸಿದೆ. ಇತ್ತೀಚೆಗಷ್ಟೇ ಟ್ರಂಪ್ ಚೀನಾದ ರಫ್ತಿನ ಮೇಲೆ ಶೇ.25 ರಷ್ಟು ತೆರಿಗೆ ವಿಧಿಸಿದ್ದರು.