ಸಂಗ್ರಹ ಚಿತ್ರ
ವಿದೇಶ
ಪಾಕ್ ಚುನಾವಣಾ ಪೂರ್ವದ ಕೆಲ ನಡೆಗಳು ಸರಿಯಿರಲಿಲ್ಲ: ಅಮೆರಿಕ
ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದ್ದು, ಮಾಜಿ ಕ್ರಿಕೆಟಿದ ಇಮ್ರಾನ್ ಖಾನ್ ಪಕ್ಷ ಅಧಿಕಾರ ರಚಿಸುವತ್ತ ಮಗ್ನವಾಗಿರುವಂತೆಯೇ ಅತ್ತ ಅಮೆರಿಕ ಪಾಕ್ ಚುನಾವಣಾ ಪ್ರಕ್ರಿಯೆ ಸರಿ ಇರಲಿಲ್ಲ ಎಂದು ಹೇಳಿದೆ.
ವಾಷಿಂಗ್ಟನ್: ಪಾಕಿಸ್ತಾನ ಸಾರ್ವತ್ರಿಕ ಚುನಾವಣೆ ಮುಕ್ತಾಯವಾಗಿದ್ದು, ಮಾಜಿ ಕ್ರಿಕೆಟಿದ ಇಮ್ರಾನ್ ಖಾನ್ ಪಕ್ಷ ಅಧಿಕಾರ ರಚಿಸುವತ್ತ ಮಗ್ನವಾಗಿರುವಂತೆಯೇ ಅತ್ತ ಅಮೆರಿಕ ಪಾಕ್ ಚುನಾವಣಾ ಪ್ರಕ್ರಿಯೆ ಸರಿ ಇರಲಿಲ್ಲ ಎಂದು ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವೈಟ್ ಹೌಸ್, ಪಾಕಿಸ್ತಾನ ಚುನಾವಣಾ ಸಂದರ್ಭದಲ್ಲಿ ಆ ದೇಶದ ಆಡಳಿತ ಕೈಗೊಂಡ ಕೆಲ ನಿರ್ಣಯಗಳು ಸರಿಇರಲಿಲ್ಲ. ನಿಷ್ಪಕ್ಷಪಾತ ಮತ್ತು ಪಾರದರ್ಷಕತೆಯ ಕೊರತೆ ಇತ್ತು ಎಂದು ಪರೋಕ್ಷವಾಗಿ ಹೇಳಿದೆ. ಈ ಬಗ್ಗೆ ಅಮೆರಿಕ ಸರ್ಕಾರಕ್ಕೆ ಕಳವಳವಿದ್ದು, ಮತದಾನ ಪೂರ್ವದಲ್ಲಿ ಕೈಗೊಂಡ ಕೆಲ ನಿರ್ಣಯಗಳು ಸರಿಯಿರಲ್ಲಿಲ್ಲ ಎಂದು ಹೇಳಿದೆ.
ಈ ಬಗ್ಗೆ ಮಾತನಾಡಿರುವ ಅಮೆರಿಕ ವಿದೇಶಾಂಗ ಇಲಾಖೆ ವಕ್ತಾರ, ಹೀದರ್ ನೌರ್ಟ್, ಮತದಾನಕ್ಕೂ ಮುನ್ನ ಅಲ್ಲಿನ ಆಡಳಿತ ಕೈಗೊಂಡ ನಿರ್ಧಾರಗಳು ಸರಿ ಇರಲಿಲ್ಲ ಎಂಬುದು ನಮ್ಮ ಭಾವನೆ. ಪ್ರಮುಖವಾಗಿ ಮತದಾನ ನೇರ ಪ್ರಸಾರಕ್ಕೆ ಖಾಸಗಿ ವಾಹಿನಿಗಳ ನಿರ್ಬಂಧ ಮತ್ತು ಮಾಧ್ಯಮಗಳ ಮೇಲಿನ ನಿಯಂತ್ರಣ ಸರಿಯಾದ ಕ್ರಮವಲ್ಲ ಎಂದು ಹೇಳಿದ್ದಾರೆ. ಅಂತೆಯೇ ಈ ಬಗ್ಗೆ ಪಾಕಿಸ್ತಾನ ಮಾನವ ಹಕ್ಕು ಆಯೋಗ ಗಮನ ಹರಿಸಿದೆ ಎಂದು ಭಾವಿಸಿದ್ದೇವೆ ಎಂದು ಹೇಳಿದ್ದಾರೆ.
ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಯ ಹಕ್ಕಾಗಿದೆ. ಇದಕ್ಕೆ ಚ್ಯುತಿ ತರುವ ಕೆಲಸ ಯಾರೂ ಮಾಡಬಾರದು. ಆದರೆ ಸ್ಥಳೀಯ ಆಡಳಿತದಿಂದಲೇ ಇದಕ್ಕೆ ಧಕ್ಕೆಯಾದರೆ ಖಂಡಿತಾ ಅದು ಕಳವಳಕಾರಿಯಾಗುತ್ತದೆ. ಆಡಳಿತ ವ್ಯವಸ್ಥೆ ಚುನಾವಣೆಯನ್ನು ಪಾರದರ್ಶಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಡೆಸಬೇಕಿತ್ತು ಎಂದು ಹೇಳುವ ಮೂಲಕ ಪಾಕ್ ಚುನಾವಣೆ ಪಾರದರ್ಶಕವಾಗಿರಲಿಲ್ಲ ಎಂದು ನೇರವಾಗಿಯೇ ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ