ಉತ್ತರ ಕೊರಿಯಾದಿಂದ ಹೊಸ ಕ್ಷಿಪಣಿ ತಯಾರಿಕೆ: ಅಮೆರಿಕ ಗುಪ್ತಚರ ಇಲಾಖೆ

ಸಿಂಗಾಪುರ ಶೃಂಗಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಮಾತು ನೀಡಿದ್ದ ಉತ್ತರಕೊರಿಯಾ ಹೊಸ ಬಗೆಯ ಕ್ಷಿಪಣಿಗಳನ್ನು ತಯಾರಿಸುತ್ತಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ಹೇಳಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಸಿಂಗಾಪುರ ಶೃಂಗಸಭೆಯಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣದ ಮಾತು ನೀಡಿದ್ದ ಉತ್ತರಕೊರಿಯಾ ಹೊಸ ಬಗೆಯ ಕ್ಷಿಪಣಿಗಳನ್ನು ತಯಾರಿಸುತ್ತಿದೆ ಎಂದು ಅಮೆರಿಕ ಗುಪ್ತಚರ ಮೂಲಗಳು ಹೇಳಿವೆ.
ಅಮೆರಿಕ ಗುಪ್ತಚರ ಇಲಾಖೆ ಕಲೆ ಹಾಕಿರುವ ಉಪಗ್ರಹ ಆಧಾರಿತ ಚಿತ್ರಗಳ ನೆರವಿನಿಂದ ಉತ್ತರ ಕೊರಿಯಾದಲ್ಲಿರುವ ಕ್ಷಿಪಣಿ ತಯಾರಿಕಾ ಘಟಕಗಳನ್ನು ಗುರುತಿಸಲಾಗಿದೆ. ಈ ಎರಡೂ ಕ್ಷಿಪಣಿ ತಯಾರಿಕಾ ಘಟಕಗಳು ಹೊಸ ಬಗೆಯದ್ದಾಗಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ರಾಜಧಾನಿ ಪ್ಯೋಂಗ್ಯಾಂಗ್ ನ ಹೊರವಲಯದಲ್ಲಿರುವ ಸ್ಯಾನುಂಡಾಂಗ್ ನಲ್ಲಿ ಕ್ಷಿಪಣಿ ತಯಾರಿಕಾ ಘಟಕಗಳು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿವೆ. ಈ ಎರಡು ಘಚಕಗಳಲ್ಲಿ ಕನಿಷ್ಠ 2 ದ್ರವ ಇಂಧನ ಆಧಾರಿತ ಖಂಡಾಂತರ ಕ್ಷಿಪಣಿಗಳನ್ನು ತಯಾರಿಸುತ್ತಿರಬಹುದು. ಬಹುಶಃ ಈ ಕ್ಷಿಪಣಿಗಳು ಅಮೆರಿಕದವರೆಗಿನ ಗುರಿಗಳನ್ನು ನಿರಾಯಾಸವಾಗಿ ತಲುಪಬಹುದು ಎಂದು ಶಂಕಿಸಿದ್ದಾರೆ. 
ಇನ್ನು ಈ ಹಿಂದೆ ಸಿಂಗಾಪುರದಲ್ಲಿ ನಡೆದಿದ್ದ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಭೇಟಿ ಮಾಡಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com