ಗಿಡ ಕತ್ತರಿಸುತ್ತಿದ್ದಾಗ ಹಾವಿನ ತಲೆ ಕಟ್, ತುಂಡಾದ ತಲೆಯಿಂದಲೇ ವ್ಯಕ್ತಿಯ ಕಚ್ಚಿ ಸೇಡು ತೀರಿಸಿಕೊಂಡ ಹಾವು!

ಗಿಡ ಕತ್ತರಿಸುತ್ತಿದ್ದಾಗ ಗಿಡದೊಂದಿಗಿದ್ದ ಹಾವಿನ ತಲೆಯನ್ನು ತಿಳಿಯದೆಯೇ ಕತ್ತರಿಸಿದ ವ್ಯಕ್ತಿಯನ್ನು ತುಂಡಾದ ತಲೆಯಿಂದಲೇ ಕಚ್ಚಿದ ಹಾವೊಂದು ಸೇಡು ತೀರಿಸಿಕೊಂಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಕಾರ್ಪಸ್ ಕ್ರಿಸ್ಟಿ (ಟೆಕ್ಸಾಸ್): ಗಿಡ ಕತ್ತರಿಸುತ್ತಿದ್ದಾಗ ಗಿಡದೊಂದಿಗಿದ್ದ ಹಾವಿನ ತಲೆಯನ್ನು ತಿಳಿಯದೆಯೇ ಕತ್ತರಿಸಿದ ವ್ಯಕ್ತಿಯನ್ನು ತುಂಡಾದ ತಲೆಯಿಂದಲೇ ಕಚ್ಚಿದ ಹಾವೊಂದು ಸೇಡು ತೀರಿಸಿಕೊಂಡಿರುವ ಘಟನೆ ಅಮೆರಿಕಾದ ಟೆಕ್ಸಾಸ್ ನಲ್ಲಿ ನಡೆದಿದೆ. 
ಕಾರ್ಪಸ್ ಕ್ರಿಸ್ಟಿ ಎಂಬ ನಗರದಲ್ಲಿ ಕಳೆದ ತಿಂಗಳು ಘಟನೆ ನಡೆದಿದೆ. ವ್ಯಕ್ತಿಯ ಪತ್ನಿ ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಘಟನೆ ಕುರಿತಂತೆ ಮಾಹಿತಿ ನೀಡಿದ್ದಾರೆ. 
ಮೇ.27 ರಂದು ಮನೆಯ ಮುಂಭಾಗದಲ್ಲಿದ್ದ ಉದ್ಯಾನದಲ್ಲಿ ಪತಿ ಕೆಲಸ ಮಾಡುತ್ತಿದ್ದರು. ಗಿಡ ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಅದರ ಜೊತೆಯಲ್ಲಿಯೇ ಇದ್ದ 4 ಅಡಿ ಉದ್ದನೆಯ ರಾಟಲ್ ಹಾವಿನ ತಲೆಯನ್ನು ತಿಳಿಯದೆಯೇ ಕತ್ತರಿಸಿಬಿಟ್ಟಿದ್ದರು. ಈ ವೇಳೆ ಹಾವಿನ್ನು ಕತ್ತರಿಸಿದ ವಿಚಾರ ತಿಳಿದ ಅವರು ಮತ್ತೇನೂ ಮಾಡಲು ಸಾಧ್ಯವಿಲ್ಲ ಎಂದು ತಿಳಿದು ಹಾವನ್ನು ಬೇರೆಡೆಗೆ ಎಸೆಯಲು ನಿರ್ಧರಿಸಿ ಹಾವಿನ ತಲೆ ಹಾಗೂ ದೇಹವನ್ನು ತೆಗೆದುಕೊಂಡರು. 
ತಲೆ ತುಂಡಾಗಿದ್ದರೂ ಹಾವು ಪತಿಯನ್ನು ಕಚ್ಚಿತು. ಕೂಡಲೇ 911ಗೆ ಕರೆ ಮಾಡಿ, ಕಾರಿನಲ್ಲಿ ಪತಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದೆ. ಹಾವು ಕಚ್ಚಿದ ಕೆಲವೇ ನಿಮಿಷಗಳಲ್ಲಿ ಪತಿ ಕುಸಿದು ಬಿದ್ದಿದ್ದರು. ಅವರ ಕಣ್ಣುಗಳು ಕಾಣದಂತಾಗಿತ್ತು. ಆಂತರಿಕ ರಕ್ತಸ್ರಾವವಾಗುತ್ತಿತ್ತು. ಬಳಿಕ ಏರ್ ಆ್ಯಂಬುಲೆನ್ಸ್ ಮೂಲಕ ಪತಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. 
ಹಾವುಗಳಿಂದ ಕಡಿತಕ್ಕೊಳಗಾಗುವ ವ್ಯಕ್ತಿಗಳಿಗೆ ಸಾಮಾನ್ಯವಾಗಿ 2-4 ಡೋಸ್ ಆ್ಯಂಟಿವೆನಮ್ (ವಿಷನಿರೋಧಕ) ಔಷಧಿಯನ್ನು ನೀಡಲಾಗುತ್ತದೆ. ಆದರೆ, ಈ ಪ್ರಕರಣದಲ್ಲಿ ಘಟನೆ ನಡೆದ ಬಳಿಕ 1 ವಾರಗಳ ಕಾಲ ವ್ಯಕ್ತಿಗೆ 26 ಆ್ಯಂಟಿವೆನಮ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಇದೀಗ ವ್ಯಕ್ತಿ ಪ್ರಾಣಾಪಾಯಿಂದ ಪಾರಾಗಿದ್ದು, ವ್ಯಕ್ತಿಯ ದೇಹದಲ್ಲಿದ್ದ ಮೂತ್ರ ಪಿಂಡಗಳು ದುರ್ಬಲಗೊಂಡಿವೆ ಎಂದು ವರದಿಗಳು ತಿಳಿಸಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com