ಇಂದು ಮತ್ತೆ ಎರಡು ದಿನಗಳ ಶಾಂಘೈ ಸಹಕಾರ ಸಂಘಟನೆಯ 18ನೇ ಶೃಂಗಸಭೆ(ಎಸ್ ಸಿಒ)ಯಲ್ಲಿ ಪಾಲ್ಗೊಳ್ಳಲು ಚೀನಾದ ಕ್ವಿಂಗ್ಡಾವೋಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು, ಚೀನಾ ಅಧ್ಯಕ್ಷರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ವೇಳೆ ದ್ವಿಪಕ್ಷೀಯ ಬಾಂಧವ್ಯಗಳನ್ನು ಮತ್ತಷ್ಟು ಸೌಹಾರ್ದಗೊಳಿಸುವ ನಿಟ್ಟಿನಲ್ಲಿ ಉಭಯ ನಾಯಕರು ಪರಸ್ಪರ ಚರ್ಚಿಸಿದರು ಎನ್ನಲಾಗಿದೆ. ಅಲ್ಲದೆ ಕಳೆದ ಅನೌಪಚಾರಿಕ ಭೇಟಿ ವೇಳೆ ದ್ಚಿಪಕ್ಷೀಯ ಸಂಬಂಧಗಳ ವೃದ್ಧಿ ಸಂಬಂಧ ನಡೆದಿದ್ದ ಮಾತುಕತೆಗಳನ್ನು ಸಮ್ಮೇಳನದಲ್ಲಿ ಒಪ್ಪಂದಗಳ ಮೂಲಕ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಿಳಿದು ಬಂದಿದೆ.