ನಾವಿಲ್ಲಿರುವುದು ಸುಲಭದ ಮಾತಲ್ಲ, ಹಳೆಯ ಪೂರ್ವಾಗ್ರಹ ಅಡೆತಡೆಗಳನ್ನು ದಾಟಿ ಬಂದಿದ್ದೇವೆ: ಕಿಮ್ ಜಾಂಗ್ ಉನ್

ನಾನಿಲ್ಲಿರುವುದು ಸುಲಭ ಮಾತಲ್ಲ, ಹಳೆಯ ಪೂರ್ವಾಗ್ರಹ ವಿಚಾರಗಳು ಅಡೆತಡೆಗಳಾಗಿ ಕೆಲಸ ಮಾಡಿದ್ದು, ಅದನ್ನು ದಾಟಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿ ವೃದ್ಧಿಯಾಗಲಿದೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಸಿಂಗಾಪುರದಲ್ಲಿ ಉನ್-ಟ್ರಂಪ್ ಐತಿಹಾಸಿಕ ಭೇಟಿ
ಸಿಂಗಾಪುರದಲ್ಲಿ ಉನ್-ಟ್ರಂಪ್ ಐತಿಹಾಸಿಕ ಭೇಟಿ
ಸಿಂಗಾಪುರ: ನಾನಿಲ್ಲಿರುವುದು ಸುಲಭ ಮಾತಲ್ಲ, ಹಳೆಯ ಪೂರ್ವಾಗ್ರಹ ವಿಚಾರಗಳು ಅಡೆತಡೆಗಳಾಗಿ ಕೆಲಸ ಮಾಡಿದ್ದು, ಅದನ್ನು ದಾಟಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿ ವೃದ್ಧಿಯಾಗಲಿದೆ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿದ್ದಾರೆ.
ಸಿಂಗಾಪುರದ ಸೆಂಟೋಸಾ ದ್ವೀಪದಲ್ಲಿರುವ ಕ್ಯಾಪೆಲ್ಲಾ ಹೋಟೆಲ್​ನಲ್ಲಿ ನಡೆಯುತ್ತಿರುವ ಐತಿಹಾಸಿಕ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿ ಮಾಡಿ ಸುಮಾರು 45 ನಿಮಿಷಗಳ ಕಾಲ ಮುಖಾಮುಖಿ ಚರ್ಚೆ ನಡೆಸಿದರು. ಚರ್ಚೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಉನ್, ಇದೊಂದು ಐತಿಹಾಸಿಕ ಭೇಟಿಯಾಗಿದ್ದು, ಉಭಯ ದೇಶಗಳ ಸಂಬಂಧ ವೃದ್ಧಿಗೆ ಇದು ಅಡಿಗಲ್ಲು ಎಂದು ವಿಶ್ಲೇಷಿಸಿದರು.
ಅಂತೆಯೇ ' ನಾನಿಲ್ಲಿರುವುದು ಸುಲಭ ಮಾತಲ್ಲ. ಹಳೆಯ ಪೂರ್ವಾಗ್ರಹ ವಿಚಾರಗಳು ಅಡೆತಡೆಗಳಾಗಿ ಕೆಲಸ ಮಾಡಿದ್ದು, ಅದನ್ನು ದಾಟಿ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನಡುವಿನ ಸಂಬಂಧ ಉತ್ತಮ ರೀತಿಯಲ್ಲಿ ವೃದ್ಧಿಯಾಗುವ ವಿಶ್ವಾಸವಿದೆ. ತಪ್ಪು ಪೂರ್ವಾಗ್ರಹಗಳು ಮತ್ತು ಸಂಪ್ರದಾಯಗಳು ಕೆಲವೊಮ್ಮೆ ನಿಮ್ಮ ಕಣ್ಣು ಮತ್ತು ಕಿವಿಗಳನ್ನು ಮುಚ್ಚಿರುವಂತೆ ಮಾಡುತ್ತದೆ. ಆದರೆ ನಾವು ಇಂದು ಇವೆಲ್ಲ ಅಡೆತಡೆಗಳನ್ನು ಮೀರಿ ಇಲ್ಲಿಗೆ ಆಗಮಿಸಿದ್ದೇವೆ ಎಂದು ಕಿಮ್ ಜಾಂಗ್ ಉನ್ ಹೇಳಿದರು.
ಅಂತೆಯೆ ಕುತೂಹಲದ ಕೇಂದ್ರ ಬಿಂದುವಾಗಿರುವ ಅಮೆರಿಕ-ಉತ್ತರಕೊರಿಯಾ ಅಣ್ವಸ್ತ್ರ ಒಪ್ಪಂದ ಕುರಿತು ಪರೋಕ್ಷವಾಗಿ ಮಾರ್ಮಿಕವಾಗಿ ಮಾತನಾಡಿದ ಉನ್, ನೀವು ಕಾತರದಿಂದ ಕಾಯುತ್ತಿರುವ ವಿಚಾರದ ಬಗ್ಗೆ ನಾವು ಚರ್ಚೆ ಸಕಾರಾತ್ಮಕ ನಡೆಸಲಿದ್ದೇವೆ ಎಂದು ಹೇಳುವ ಮೂಲಕ ತಮ್ಮ ಅಪಾಯಕಾರಿ ಅಣ್ವಸ್ತ್ರ ಯೋಜನೆ ಕುರಿತಂತೆ ಉನ್ ಹೇಳಿದ್ದಾರೆ. 
ಈ ಹಿಂದೆ ದಕ್ಷಿಣ ಕೊರಿಯಾಗೆ ಭೇಟಿ ನೀಡಿದ್ದ ಕಿಮ್ ಜಾಂಗ್ ಉನ್, ಅಮೆರಿಕ ದ್ವಿಪಕ್ಷೀಯ ಮಾತುಕತೆ ಆರಂಭಿಸಿದರೆ ತನ್ನ ಅಣ್ವಸ್ತ್ರ ಯೋಜನೆಗಳ ಕುರಿತು ಮರು ಚಿಂತನೆ ಮಾಡುವುದಾಗಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com